2.ಹೀಗೆ ಅವರು (ಸತ್ಯವನ್ನು) ಸುಳ್ಳೆಂದು ತಿರಸ್ಕರಿಸಿ ಬಿಟ್ಟಿದ್ದಾರೆ. ಅವರು ಗೇಲಿ ಮಾಡುತ್ತಿದ್ದ ವಾಸ್ತವವು (ಶಿಕ್ಷೆಯು) ಬಹು ಬೇಗನೇ ಅವರ ಬಳಿಗೆ ಬಂದು ಬಿಡುವುದು
11.ಅವನು (ಅಲ್ಲಾಹನು) ಹೇಳಿದನು; ಖಂಡಿತ ಹಾಗಾಗದು. ಇದೀಗ ನೀವಿಬ್ಬರೂ ನಮ್ಮ ಪುರಾವೆಗಳೊಂದಿಗೆ ಹೋಗಿರಿ. ನಾವು ಎಲ್ಲವನ್ನೂ ಕೇಳುವವರಾಗಿ ನಿಮ್ಮ ಜೊತೆಗೇ ಇರುವೆವು
14.ಅವನು (ಫಿರ್ಔನ್) ಹೇಳಿದನು; ನಾವು ನಿನ್ನ ಬಾಲ್ಯದಲ್ಲಿ ನಿನ್ನನ್ನು ನಮ್ಮ ನಡುವೆ ಪೋಷಿಸಿರಲಿಲ್ಲವೇ ಮತ್ತು ನಿನ್ನ ಬದುಕಿನ ಹಲವು ವರ್ಷಗಳನ್ನು ನೀನು ನಮ್ಮ ಜೊತೆಗೆ ಕಳೆದಿರಲಿಲ್ಲವೇ
17.ಆ ಬಳಿಕ ನಾನು ನಿಮಗೆ ಅಂಜಿ ನಿಮ್ಮ ಬಳಿಯಿಂದ ಓಡಿ ಹೋದೆ. ಆ ಬಳಿಕ ನನ್ನ ಒಡೆಯನು ನನಗೆ ಹೊಣೆಗಾರಿಕೆಯನ್ನು ನೀಡಿದನು ಮತ್ತು ನನ್ನನ್ನು ದೂತನಾಗಿ ನೇಮಿಸಿದನು
18.ಇನ್ನು, ನೀನು ನನ್ನ ಮೇಲೆ ಋಣ ಹೊರಿಸುವ ಆ ಉಪಕಾರಗಳು. ನಿಜವಾಗಿ, ನೀನು ಇಸ್ರಾಈಲರ ಸಂತತಿಯನ್ನು ದಾಸ್ಯಕ್ಕೆ ಒಳಪಡಿಸಿರುವೆ
20.ಅವರು (ಮೂಸಾ) ಹೇಳಿದರು; ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ನಂಬುವವರಾಗಿದ್ದರೆ (ಚೆನ್ನಾಗಿತ್ತು)
24.ಅವರು (ಮೂಸಾ) ಹೇಳಿದರು; ಅವನು ಪೂರ್ವದ ಹಾಗೂ ಪಶ್ಚಿಮದ ಹಾಗೂ ಅವೆರಡರ ನಡುವೆ ಇರುವ ಎಲ್ಲವುಗಳ ಒಡೆಯನು. ನೀವು ಬುದ್ಧಿ ಉಳ್ಳವರಾಗಿದ್ದರೆ (ಚೆನ್ನಾಗಿತ್ತು)
25.ಅವನು (ಫಿರ್ಔನ್) ಹೇಳಿದನು; ನೀನು ನನ್ನ ಹೊರತು ಬೇರೆ ಯಾರನ್ನಾದರೂ ದೇವರಾಗಿಸಿಕೊಂಡರೆ ನಾನು ಖಂಡಿತ ನಿನ್ನನ್ನು ಕೈದಿಗಳ ಸಾಲಿಗೆ ಸೇರಿಸುವೆನು
28.ಆಗ ಅವರು (ಮೂಸಾ) ತಮ್ಮ ಊರುಗೋಲನ್ನು ಕೆಳಕ್ಕೆ ಎಸೆದು ಬಿಟ್ಟರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಿನ ರೂಪ ತಾಳಿತು
32.ಅವರು (ಆಸ್ಥಾನಿಗರು ) ಹೇಳಿದರು; ಅವನಿಗೆ ಹಾಗೂ ಅವನ ಸಹೋದರನಿಗೆ ಕಾಲಾವಕಾಶ ಕೊಡಿರಿ ಮತ್ತು ಜನರನ್ನು ಒಟ್ಟು ಸೇರಿಸುವವರನ್ನು ವಿವಿಧ ನಗರಗಳಿಗೆ ರವಾನಿಸಿರಿ
45.ಅವನು (ಫಿರ್ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ಅವನನ್ನು ನಂಬಿ ಬಿಟ್ಟಿರಿ. ಅವನೇ (ಮೂಸಾ) ನಿಮಗೆ ಜಾದೂ ಕಲಿಸಿದ ನಿಮ್ಮ ಮಹಾ ನಾಯಕನಾಗಿರಬೇಕು. ನಿಮಗೆ ಬಹುಬೇಗನೇ ತಿಳಿಯಲಿದೆ. ನಾನು ಖಂಡಿತ ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆಗೇರಿಸಿ ಬಿಡುವೆನು
47.ನಾವು, (ಸತ್ಯವನ್ನು) ನಂಬಿದವರಲ್ಲಿ ಮೊದಲಿಗರಾದ್ದರಿಂದ ನಮ್ಮೊಡೆಯನು ನಮ್ಮ ತಪ್ಪುಗಳನ್ನೆಲ್ಲಾ ಖಂಡಿತ ಕ್ಷಮಿಸಿ ಬಿಡುವನೆಂದು ನಿರೀಕ್ಷಿಸುತ್ತೇವೆ
48.ಮತ್ತು (ಮುಂದೆ) ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನನ್ನ ದಾಸರೊಂದಿಗೆ ಹೊರಟು ಬಿಡಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು
59.ನಾವು ಮೂಸಾರಿಗೆ, ‘‘ನಿಮ್ಮ ಊರುಗೋಲಿನಿಂದ ಕಡಲಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳಿಸಿದೆವು. (ಅವರು ಹೊಡೆದಾಗ,) ಅದು (ಸಮುದ್ರವು) ಇಬ್ಭಾಗವಾಗಿ ಬಿಟ್ಟಿತು ಮತ್ತು ಪ್ರತಿಯೊಂದು ಭಾಗವೂ ಒಂದು ಬೃಹತ್ ಪರ್ವತದಂತಿತ್ತು
105.ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಎಲ್ಲ ಲೋಕಗಳ ಒಡೆಯನು ಮಾತ್ರ
107.ಅವರು (ನಾಡಿನವರು) ಹೇಳಿದರು; ನಿಮ್ಮನ್ನು ಅನುಸರಿಸುತ್ತಿರುವವರು ಕೀಳು ವರ್ಗದವರು. ಹೀಗಿರುತ್ತಾ ನಾವು ನಿಮ್ಮನ್ನು ನಂಬಬೇಕೇ
112.ಅವರು (ನಾಡಿನವರು) ಹೇಳಿದರು; ಓ ನೂಹ್, ನೀನು (ಇದನ್ನೆಲ್ಲಾ) ನಿಲ್ಲಿಸದಿದ್ದರೆ ಖಂಡಿತ, ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು
114.ನೀನು ನನ್ನ ಹಾಗೂ ಅವರ ನಡುವೆ ಒಂದು ಸ್ಪಷ್ಟ ತೀರ್ಮಾನ ಮಾಡಿಬಿಡು ಮತ್ತು ನನ್ನನ್ನೂ ನನ್ನ ಜೊತೆಗಿರುವ ವಿಶ್ವಾಸಿಗಳನ್ನೂ ರಕ್ಷಿಸು
123.ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಂತು ಎಲ್ಲ ಲೋಕಗಳ ಒಡೆಯನ ಬಳಿಯಲ್ಲೇ ಇದೆ
135.ಹೀಗೆ, ಅವರು ಅವರನ್ನು (ಹೂದ್ರನ್ನು) ತಿರಸ್ಕರಿಸಿದರು ಮತ್ತು ನಾವು ಅವರನ್ನು (ಹೂದ್ರ ಜನಾಂಗದವರನ್ನು) ನಾಶಮಾಡಿದೆವು. ಇದರಲ್ಲಿ ಖಂಡಿತ ಪಾಠವಿದೆ. ಅವರಲ್ಲಿ ಹೆಚ್ಚಿನವರು ನಂಬುವವರಾಗಿರಲಿಲ್ಲ
141.ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನ್ನ ಪ್ರತಿಫಲವು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರವಿದೆ
151.ಅವರು (ಸಾಲಿಹ್) ಹೇಳಿದರು; ಈ ಹೆಣ್ಣೊಂಟೆ. ಇದು ನೀರು ಕುಡಿಯುವುದಕ್ಕೆ ಮತ್ತು ನೀವು ನೀರು ಕುಡಿಯುವುದಕ್ಕೆ (ಪ್ರತ್ಯೇಕ) ದಿನ ನಿಗದಿಯಾಗಿರುತ್ತದೆ
160.ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ
162.ಮತ್ತು ನೀವು ನಿಮಗಾಗಿ ಅಲ್ಲಾಹನು ಸೃಷ್ಟಿಸಿರುವ ನಿಮ್ಮ ಪತ್ನಿಯರನ್ನು ಬಿಟ್ಟು ಬಿಡುತ್ತೀರಾ? ನಿಜವಾಗಿ, ನೀವು ಅತಿಕ್ರಮಿಗಳಾಗಿರುವಿರಿ
176.ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಕೇಳುತ್ತಿಲ್ಲ. ನನ್ನ ಪ್ರತಿಫಲವಿರುವುದು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರ
185.ಅವರು (ಐಕಃದವರು) ಅವರನ್ನು (ಶುಐಬ್ರನ್ನು) ತಿರಸ್ಕರಿಸಿದರು. ಕೊನೆಗೆ ನೆರಳಿನ ದಿನದ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು. ಅದು ನಿಜಕ್ಕೂ ಒಂದು ಮಹಾ ದಿನದ ಶಿಕ್ಷೆಯಾಗಿತ್ತು
215.ಮತ್ತು ಸಾಷ್ಟಾಂಗವೆರಗುವವರ (ನಮಾಝ್ ಸಲ್ಲಿಸುವವರ) ಜೊತೆಗೆ ನೀವು ತಿರುಗಾಡುತ್ತಿರುವಾಗ (ಅವನು ನಿಮ್ಮನ್ನು ಕಾಣುತ್ತಿರುತ್ತಾನೆ)
223.ಸತ್ಯವನ್ನು ನಂಬಿದವರು ಮತ್ತು ಸತ್ಕರ್ಮಿಗಳು ಇದಕ್ಕೆ ಹೊರತಾಗಿರುತ್ತಾರೆ. ಅವರು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುತ್ತಾರೆ ಮತ್ತು ತಮ್ಮ ಮೇಲೆ ಅನ್ಯಾಯವಾದ ಬಳಿಕವಷ್ಟೇ ಅದಕ್ಕೆ ಪ್ರತೀಕಾರವೆಸಗುತ್ತಾರೆ. ಅನ್ಯಾಯ ಎಸಗಿದವರು, ತಮ್ಮನ್ನು ಎಂತಹ ನೆಲೆಗೆ ಮರಳಿಸಲಾಗುವುದು ಎಂಬುದನ್ನು ಅರಿಯಲಿದ್ದಾರೆ
227.ನಾವು, ಪರಲೋಕವನ್ನು ನಂಬದವರ ಪಾಲಿಗೆ, ಅವರ ಕರ್ಮಗಳನ್ನು ಖಂಡಿತ, ಚಂದಗಾಣಿಸಿ ಬಿಟ್ಟಿದ್ದೇವೆ. ಆದ್ದರಿಂದ ಅವರು ಕುರುಡಾಗಿ ಅಲೆಯುತ್ತಲೇ ಇರುತ್ತಾರೆ