عبدالسلام پوتیگه · ಕನ್ನಡ

1.ಅವರು, ಆ ಪರಮ ದಯಾಳುವಿನ ಕಡೆಯಿಂದ ತಮ್ಮ ಬಳಿಗೆ ಬಂದ ಪ್ರತಿಯೊಂದು ಉಪದೇಶವನ್ನೂ ಸಂಪೂರ್ಣ ಕಡೆಗಣಿಸುತ್ತಾರೆ
45.ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ಅವನನ್ನು ನಂಬಿ ಬಿಟ್ಟಿರಿ. ಅವನೇ (ಮೂಸಾ) ನಿಮಗೆ ಜಾದೂ ಕಲಿಸಿದ ನಿಮ್ಮ ಮಹಾ ನಾಯಕನಾಗಿರಬೇಕು. ನಿಮಗೆ ಬಹುಬೇಗನೇ ತಿಳಿಯಲಿದೆ. ನಾನು ಖಂಡಿತ ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆಗೇರಿಸಿ ಬಿಡುವೆನು
223.ಸತ್ಯವನ್ನು ನಂಬಿದವರು ಮತ್ತು ಸತ್ಕರ್ಮಿಗಳು ಇದಕ್ಕೆ ಹೊರತಾಗಿರುತ್ತಾರೆ. ಅವರು ಪದೇ ಪದೇ ಅಲ್ಲಾಹನನ್ನು ಸ್ಮರಿಸುತ್ತಿರುತ್ತಾರೆ ಮತ್ತು ತಮ್ಮ ಮೇಲೆ ಅನ್ಯಾಯವಾದ ಬಳಿಕವಷ್ಟೇ ಅದಕ್ಕೆ ಪ್ರತೀಕಾರವೆಸಗುತ್ತಾರೆ. ಅನ್ಯಾಯ ಎಸಗಿದವರು, ತಮ್ಮನ್ನು ಎಂತಹ ನೆಲೆಗೆ ಮರಳಿಸಲಾಗುವುದು ಎಂಬುದನ್ನು ಅರಿಯಲಿದ್ದಾರೆ