زلزلہ
عبدالسلام پوتیگه · ಕನ್ನಡ
1.
ಭೂಮಿಯು ಭೂಕಂಪದಿಂದ ಕಂಪಿಸುವಾಗ
2.
ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ
3.
ಮತ್ತು ಮಾನವನು – ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ
4.
ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು
5.
ಏಕೆಂದರೆ, ಅದರ ಒಡೆಯನು (ಹಾಗೆ ಮಾಡಲು) ಅದಕ್ಕೆ ಆದೇಶಿಸಿರುವನು
6.
ಅಂದು ಜನರು ಗುಂಪು ಗುಂಪಾಗಿ ಹೊರ ಬರುವರು – ತಮ್ಮ ಕರ್ಮಗಳನ್ನು ಕಾಣಲಿಕ್ಕಾಗಿ
7.
ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು
8.
ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು