1.ಅವರ ದೃಷ್ಟಿಗಳು ಭೀತವಾಗಿರುವವು ಮತ್ತು ಅಪಮಾನವು ಅವರನ್ನು ಆವರಿಸಿ ಕೊಂಡಿರುವುದು. ಅದುವೇ ಅವರಿಗೆ ವಾಗ್ದಾನ ಮಾಡಲಾಗಿದ್ದ ದಿನ
2.‘‘ನಿಮ್ಮ ಜನಾಂಗದವರ ಮೇಲೆ ಕಠಿಣ ಶಿಕ್ಷೆಯು ಬಂದೆರಗುವ ಮುನ್ನ ಅವರನ್ನು ಎಚ್ಚರಿಸಿರಿ’’ ಎನ್ನುತ್ತಾ ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದೆವು
5.‘‘ಅವನು (ಅಲ್ಲಾಹನು) ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ಒಂದು ನಿರ್ದಿಷ್ಟ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡುವನು. ಖಂಡಿತವಾಗಿಯೂ ಅಲ್ಲಾಹನು ನಿಶ್ಚಯಿಸಿರುವ ಸಮಯ ಬಂದು ಬಿಟ್ಟರೆ ಅದನ್ನು ನಿವಾರಿಸಲಾಗುವುದಿಲ್ಲ. ನೀವು ಇದನ್ನು ಅರಿತಿದ್ದರೆ ಎಷ್ಟು ಚೆನ್ನಾಗಿತ್ತು
8.‘‘ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಆಮಂತ್ರಿಸಿದಾಗಲೆಲ್ಲಾ ಅವರು ತಮ್ಮ ಬೆರಳುಗಳನ್ನು ತಮ್ಮ ಕಿವಿಗಳೊಳಗೆ ತುರುಕಿ ಕೊಂಡರು ಹಾಗೂ ತಮ್ಮ ವಸ್ತ್ರಗಳನ್ನು ತಮ್ಮ ಮೇಲೆ ಎಳೆದು ಕೊಂಡರು ಮತ್ತು ಅವರು ಉದ್ಧಟತನ ತೋರಿದರು ಹಾಗೂ ಭಾರೀ ಅಹಂಕಾರ ಪ್ರದರ್ಶಿಸಿದರು’’
13.‘‘ಸಂಪತ್ತು ಹಾಗೂ ಸಂತತಿಗಳ ಮೂಲಕ ಅವನು ನಿಮಗೆ ನೆರವಾಗುವನು ಮತ್ತು ನಿಮಗಾಗಿ ತೋಟಗಳನ್ನು ರಚಿಸುವನು ಹಾಗೂ ನಿಮಗಾಗಿ ನದಿಗಳನ್ನೂ ಹರಿಸುವನು’’
22.ನೂಹರು ಹೇಳಿದರು; ‘‘ನನ್ನೊಡೆಯಾ, ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಯಾರಿಗೆ ತಮ್ಮ ಸಂಪತ್ತು ಮತ್ತು ಸಂತಾನಗಳಿಂದ ನಷ್ಟ ಮಾತ್ರ ಆಗಿದೆಯೋ, ಅಂಥವರನ್ನು ಅವರು ಅನುಸರಿಸುತ್ತಿದ್ದಾರೆ’’
24.‘‘ಮತ್ತು ಅವರು – ನಿಮ್ಮ ದೇವರುಗಳನ್ನು ಖಂಡಿತ ಕೈ ಬಿಡಬೇಡಿ. ವದ್ದ್ ಅನ್ನಾಗಲೀ ಸುವಾಅ್ ಅನ್ನಾಗಲೀ ಯಗೂಸ್, ಯಊಕ್ ಮತ್ತು ನಸ್ರ್ರನ್ನಾಗಲೀ ಕೈ ಬಿಡಬೇಡಿ – ಎನ್ನುತ್ತಿದ್ದಾರೆ’’
26.ಕೊನೆಗೆ, ಅವರ ಅಪರಾಧಗಳ ಕಾರಣ, ಅವರನ್ನು ನೀರಲ್ಲಿ ಮುಳುಗಿಸಲಾಯಿತು ಮತ್ತು ಬೆಂಕಿಯೊಳಗೆ ಎಸೆಯಲಾಯಿತು. ಆಗ ಅಲ್ಲಾಹನ ಹೊರತು ಅವರಿಗೆ ಯಾವ ಸಹಾಯಕರೂ ಸಿಗಲಿಲ್ಲ
28.‘‘ನೀನು ಅವರನ್ನು ಬಿಟ್ಟು ಬಿಟ್ಟರೆ ಅವರು ನಿನ್ನ ದಾಸರನ್ನು ದಾರಿಗೆಡಿಸುವರು ಮತ್ತು ಅವರ ಸಂತತಿಗಳೂ ಕೇವಲ ದುಷ್ಟರೂ ಕೃತಘ್ನರೂ ಆಗಿರುವರು’’