5.ಐವತ್ತು ಸಾವಿರ ವರ್ಷಗಳಷ್ಟು ಧೀರ್ಘವಾಗಿರುವ ಒಂದು ದಿನ, ಮಲಕ್ಗಳು ಮತ್ತು ರೂಹ್ (ಜಿಬ್ರೀಲ್) ಅವನೆಡೆಗೆ ಏರಿ ಹೋಗುತ್ತಾರೆ
33.ಅವರು (ಸ್ವರ್ಗಕ್ಕೆ ಅರ್ಹರಾದ ಸಜ್ಜನರು) ತಮ್ಮನ್ನು ನಂಬಿ ಒಪ್ಪಿಸಲಾದ ಹೊಣೆಗಳನ್ನು ನಿಭಾಯಿಸುತ್ತಾರೆ ಮತ್ತು ತಮ್ಮ ಕರಾರುಗಳನ್ನು ಪಾಲಿಸುತ್ತಾರೆ
41.ಖಂಡಿತ ಇಲ್ಲ. ನಾನು ಪೂರ್ವಗಳ ಮತ್ತು ಪಶ್ಚಿಮಗಳ ಒಡೆಯನ ಆಣೆ ಹಾಕಿ ಹೇಳುತ್ತಿದ್ದೇನೆ, ನಾವು ಖಂಡಿತ ಅದನ್ನು ಮಾಡಬಲ್ಲೆವು
43.ಅವರನ್ನು ಬಿಟ್ಟು ಬಿಡಿರಿ. ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ನಿರರ್ಥಕ ಕೆಲಸಗಳಲ್ಲಿ ಮತ್ತು ಆಟ ವಿನೋದಗಳಲ್ಲಿ ನಿರತರಾಗಿರಲಿ
44.ಅವರು, ತಮ್ಮ ಗೋರಿಗಳಿಂದ ಎದ್ದು ಹೊರ ಬರುವ ದಿನ, ಒಂದು ನಿರ್ದಿಷ್ಟ ಗುರಿಯೆಡೆಗೋ ಎಂಬಂತೆ ಆತುರರಾಗಿ ಧಾವಿಸುತ್ತಿರುವರು