8.ಅದನ್ನು ಸತತ ಏಳು ರಾತ್ರಿ ಹಾಗೂ ಎಂಟು ದಿನಗಳ ಕಾಲ ಅವರ ಮೇಲೆ ಹೇರಲಾಯಿತು. ಮತ್ತು ಅಲ್ಲಿದ್ದವರೆಲ್ಲರೂ ಟೊಳ್ಳಾದ ಖರ್ಜೂರದ ಕಾಂಡಗಳೋ ಎಂಬಂತೆ ಸತ್ತು ಬಿದ್ದಿರುವುದು ನಿಮಗೆ ಕಾಣಿಸುತ್ತಿತ್ತು
18.ಮಲಕ್ಗಳು ಅದರ ಸುತ್ತಲೂ ಇರುವರು, ಮತ್ತು ಆ ದಿನ ಎಂಟು ಮಂದಿ (ಮಲಕ್ಗಳು) ನಿಮ್ಮೊಡೆಯನ ಪೀಠವನ್ನು ತಮ್ಮ ಮೇಲೆ ಹೊತ್ತಿರುವರು
25.(ಅವರೊಡನೆ ಹೇಳಲಾಗುವುದು;) ಕಳೆದು ಹೋದ ದಿನಗಳಲ್ಲಿ ನೀವು ಮಾಡಿದ್ದ ಕರ್ಮಗಳ ಫಲವಾಗಿ (ಇಂದು) ಮೋಜು ಮಾಡುತ್ತಾ ತಿನ್ನಿರಿ ಹಾಗೂ ಕುಡಿಯಿರಿ
26.ಕರ್ಮ ಪತ್ರವನ್ನು ಎಡಗೈಯಲ್ಲಿ ನೀಡಲಾದವನು ಹೇಳುವನು; ‘‘ಅಯ್ಯೋ, ನನಗೆ ನನ್ನ ಕರ್ಮಪತ್ರವು ಸಿಗದೆ ಇದ್ದಿದ್ದರೆ ಚೆನ್ನಾಗಿತ್ತು!’’