عبدالسلام پوتیگه · ಕನ್ನಡ

1.ಹಾಗೆಯೇ, ಇಮ್ರಾನರ ಪುತ್ರಿ ಮರ್ಯಮ್, ತನ್ನ ಮಾನವನ್ನು ಕಾಪಾಡಿಕೊಂಡಿದ್ದಳು. ನಾವು ಅದರೊಳಗೆ (ಆಕೆಯ ಗರ್ಭದೊಳಗೆ) ನಮ್ಮ ಆತ್ಮದ ಭಾಗವನ್ನು ಊದಿದೆವು. ಆಕೆಯು ತನ್ನೊಡೆಯನ ವಚನಗಳು ಹಾಗೂ ಗ್ರಂಥಗಳು ಸತ್ಯವೆಂದು ಸಮರ್ಥಿಸುವವಳಾಗಿದ್ದಳು ಮತ್ತು ಆಕೆಯು ವಿಧೇಯಳಾಗಿದ್ದಳು
10.ಅವರು ಹೇಳುವರು; ‘‘ಯಾಕಿಲ್ಲ? ಎಚ್ಚರಿಸುವವರು ನಮ್ಮ ಬಳಿಗೆ ಖಂಡಿತ ಬಂದಿದ್ದರು. ಆದರೆ ನಾವು ಅವರನ್ನು ತಿರಸ್ಕರಿಸಿದೆವು ಮತ್ತು ಅಲ್ಲಾಹನು ಏನನ್ನೂ ಕಳುಹಿಸಿಕೊಟ್ಟಿಲ್ಲ, ನೀವು ಮಹಾ ಮೋಸಕ್ಕೆ ಸಿಲುಕಿರುವಿರೆಂದು ಹೇಳಿದ್ದೆವು’’ ಎನ್ನುವರು
20.ತಮ್ಮ ಮೇಲೆ ಹಾರಾಡುತ್ತಿರುವ ಪಕ್ಷಿಗಳನ್ನು ಅವರು ನೋಡಲಿಲ್ಲವೇ? ಅವುಗಳು ತಮ್ಮ ರೆಕ್ಕೆಗಳನ್ನು ಹರಡಿಕೊಂಡೂ ಇರುತ್ತವೆ, ಅವುಗಳನ್ನು ಮಡಚಿಕೊಂಡೂ ಇರುತ್ತವೆ. ಅವುಗಳನ್ನು ಆಧರಿಸಿ ಕೊಂಡಿರುವವನು, ಆ ಪರಮ ದಯಾಳುವಿನ ಹೊರತು ಬೇರಾರೂ ಅಲ್ಲ. ಅವನು ಖಂಡಿತ ಎಲ್ಲವನ್ನೂ ನೋಡುತ್ತಿರುತ್ತಾನೆ