عبدالسلام پوتیگه · ಕನ್ನಡ

1.ಒಬ್ಬ ವ್ಯಕ್ತಿಯ ಮರಣದ ಸಮಯವು ಬಂದು ಬಿಟ್ಟರೆ, ಅಲ್ಲಾಹನು ಅದನ್ನು ಕಿಂಚಿತ್ತೂ ಮುಂದೂಡುವುದಿಲ್ಲ. ನೀವು ಮಾಡುವ ಎಲ್ಲ ಕೃತ್ಯಗಳ ಅರಿವು ಅಲ್ಲಾಹನಿಗಿದೆ
7.ಏಕೆಂದರೆ ಅವರ (ಕಾಲದ) ದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು, ‘‘ಏನು? ಮನುಷ್ಯರು ನಮ್ಮ ಮಾರ್ಗದರ್ಶಿಗಳಾಗುವುದೇ?’’ ಎನ್ನುತ್ತಾ ಧಿಕ್ಕರಿಸಿದರು ಹಾಗೂ ಮುಖ ತಿರುಗಿಸಿ ಕೊಂಡರು. ಅಲ್ಲಾಹನು ಅವರನ್ನು ಕಡೆಗಣಿಸಿ ಬಿಟ್ಟನು. ಅಲ್ಲಾಹನು ಅಪೇಕ್ಷೆಗಳಿಲ್ಲದವನು ಮತ್ತು ಪ್ರಶಂಸಾರ್ಹನಾಗಿದ್ದಾನೆ
8.ಧಿಕ್ಕಾರಿಗಳು, ತಮ್ಮನ್ನು ಮತ್ತೆ ಜೀವಂತ ಗೊಳಿಸಲಾಗದು ಎಂದು ನಂಬಿ ಕೊಂಡಿದ್ದಾರೆ. ಹೇಳಿರಿ; ಯಾಕಿಲ್ಲ? ನನ್ನೊಡೆಯನಾಣೆ, ನಿಮ್ಮನ್ನು ಖಂಡಿತ ಮತ್ತೆ ಜೀವಂತ ಗೊಳಿಸಲಾಗುವುದು ಮತ್ತು ನೀವು ಮಾಡಿದ್ದೆಲ್ಲವನ್ನೂ ಖಂಡಿತ ನಿಮಗೆ ತಿಳಿಸಲಾಗುವುದು. ಇದು ಅಲ್ಲಾಹನ ಮಟ್ಟಿಗೆ ತುಂಬಾ ಸುಲಭದ ಕೆಲಸವಾಗಿದೆ
10.ಅವನು ನಿಮ್ಮನ್ನು ಒಟ್ಟು ಸೇರಿಸುವ ದಿನ, ಅಂತಿಮ ಸಮಾವೇಶದ ಆ ದಿನವು, ಭಾರೀ ನಷ್ಟದ ದಿನವಾಗಿರುವುದು. ಅಲ್ಲಾಹನು, ತನ್ನಲ್ಲಿ ವಿಶ್ವಾಸವಿಟ್ಟು ಸತ್ಕರ್ಮ ಮಾಡಿದವನ ಎಲ್ಲ ಪಾಪಗಳನ್ನು ನಿವಾರಿಸುವನು ಮತ್ತು ಅವನನ್ನು, ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗದೊಳಗೆ ಸೇರಿಸುವನು. ಅವರು ಅಲ್ಲಿ ಸದಾಕಾಲ ಇರುವರು. ಇದು ನಿಜಕ್ಕೂ ಮಹಾ ಸೌಭಾಗ್ಯವಾಗಿದೆ
15.ವಿಶ್ವಾಸಿಗಳೇ, ನಿಮ್ಮ ಪತ್ನಿಯರು ಮತ್ತು ನಿಮ್ಮ ಸಂತಾನಗಳಲ್ಲಿ ನಿಮ್ಮ ಶತ್ರುಗಳಿದ್ದಾರೆ. ಅವರ ಕುರಿತು ಎಚ್ಚರವಾಗಿರಿ. ಇನ್ನು ನೀವು ಮನ್ನಿಸಿದರೆ, ಕಡೆಗಣಿಸಿದರೆ ಮತ್ತು ಕ್ಷಮಿಸಿದರೆ, ಅಲ್ಲಾಹನು ಖಂಡಿತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ
17.ನಿಮಗೆ ಸಾಧ್ಯವಿದ್ದಷ್ಟು, ಅಲ್ಲಾಹನಿಗೆ ಅಂಜಿರಿ. ಹಾಗೂ (ಅವನ ಆದೇಶಗಳನ್ನು) ಆಲಿಸಿರಿ ಮತ್ತು ಅನುಸರಿಸಿರಿ ಮತ್ತು (ಸತ್ಕಾರ್ಯಗಳಿಗೆ) ಖರ್ಚು ಮಾಡಿರಿ. ಅದು ನಿಮ್ಮ ಪಾಲಿಗೇ ಉತ್ತಮವಾಗಿದೆ. ತಮ್ಮ ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ನಿಜವಾದ ವಿಜಯಿಗಳು