عبدالسلام پوتیگه · ಕನ್ನಡ

1.(ದೂತರೇ,) ಅವರು (ಕೆಲವರು) ಯಾವುದಾದರೂ ವ್ಯಾಪಾರ ಅಥವಾ ಮನರಂಜಕ ವಸ್ತುವನ್ನು ಕಂಡಾಗ ನಿಮ್ಮನ್ನು ನಿಂತಲ್ಲೇ ಬಿಟ್ಟು ಅವುಗಳೆಡೆಗೆ ಧಾವಿಸಿ ಬಿಡುತ್ತಾರೆ. ಹೇಳಿರಿ ಅಲ್ಲಾಹನ ಬಳಿ ಏನಿದೆಯೋ ಅದು ಸಕಲ ಮನರಂಜನೆ ಮತ್ತು ಸರ್ವ ವ್ಯಾಪಾರಗಳಿಗಿಂತಲೂ ಉತ್ತಮವಾಗಿದೆ ಮತ್ತು ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ
2.(ದೂತರೇ,) ಕಪಟಿಗಳು ನಿಮ್ಮ ಬಳಿಗೆ ಬಂದಾಗ, ‘‘ನೀವು ಖಂಡಿತ ಅಲ್ಲಾಹನ ದೂತರೆಂದು ನಾವು ಸಾಕ್ಷಿ ಹೇಳುತ್ತೇವೆ’’ ಎನ್ನುತ್ತಾರೆ. ನೀವು ತನ್ನ ದೂತರೆಂಬುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಮತ್ತು, ಈ ಕಪಟಿಗಳು ಖಂಡಿತ ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ
5.ನೀವು ಅವರನ್ನು ಕಂಡಾಗ ಅವರ ಶರೀರಗಳು ನಿಮಗೆ ಚಂದಗಾಣುತ್ತವೆ. ಅವರು ಮಾತನಾಡಿದರೆಂದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುತ್ತೀರಿ. ಆದರೆ ಅವರ ಸ್ಥಿತಿಯು ಗೋಡೆಗೆ ಒರಗಿಸಿದ ಹಲಗೆಯಂತೆ, ತೀರಾ ಬರಡಾಗಿದೆ. ಯಾವುದಾದರೂ ದೊಡ್ಡ ಶಬ್ದವು ಕೇಳಿಸಿದೊಡನೆ, ಅವರು ಅದನ್ನು, ತಮ್ಮ ವಿರುದ್ಧ (ಏನೋ ಆಪತ್ತು ಎರಗಲಿದೆ) ಎಂದು ಭಾವಿಸುತ್ತಾರೆ. ಅವರು ಶತ್ರುಗಳು. ಅವರ ಕುರಿತು ಎಚ್ಚರವಾಗಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರು ಅದೆಲ್ಲಿ ಅಲೆಯುತ್ತಿದ್ದಾರೆ
9.‘‘ನಾವು ಮದೀನಾದೆಡೆಗೆ ಮರಳಿದಾಗ, ನಮ್ಮಲ್ಲಿನ ಗೌರವಾನ್ವಿತರು ಹೀನರನ್ನು ಅಲ್ಲಿಂದ ಹೊರ ಹಾಕುವರು’’ ಎಂದು ಅವರು ಹೇಳುತ್ತಾರೆ. ನಿಜವಾಗಿ ಗೌರವವೆಲ್ಲವೂ ಅಲ್ಲಾಹನಿಗೆ, ಅವನ ದೂತರಿಗೆ ಮತ್ತು ವಿಶ್ವಾಸಿಗಳಿಗೆ ಸೇರಿದೆ. ಆದರೆ ಕಪಟಿಗಳಿಗೆ ಇದು ತಿಳಿದಿಲ್ಲ
11.ನಿಮ್ಮಲ್ಲಿ ಯಾರಿಗಾದರೂ ಮರಣವು ಬರುವ ಮನ್ನವೇ, ನಾವು ನಿಮಗೇನನ್ನು ನೀಡಿರುವೆವೋ ಅದರಿಂದ ಖರ್ಚು ಮಾಡಿರಿ. (ಮರಣವು ಒಂದು ಬಿಟ್ಟಾಗ) ಅವನು, ‘‘ನನ್ನೊಡೆಯಾ, ನೀನು ನನಗೆ ಒಂದಿಷ್ಟು ಹೆಚ್ಚು ಕಾಲಾವಕಾಶವನ್ನೇಕೆ ಕೊಟ್ಟಿಲ್ಲ? (ಕೊಟ್ಟಿದ್ದರೆ) ನಾನು ದಾನ ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಸಾಲಿಗೆ ಸೇರುತ್ತಿದ್ದೆ’’ ಎನ್ನುವನು