34.ಜಿನ್ನ್ಗಳೇ ಮತ್ತು ಮಾನವರೇ, ಆಕಾಶಗಳ ಹಾಗೂ ಭೂಮಿಯ ಗಡಿಗಳನ್ನು ಮೀರಿ ಹೋಗಲು ನಿಮಗೆ ಸಾಧ್ಯವಿದ್ದರೆ ಮೀರಿ ಹೋಗಿರಿ. (ಅಲ್ಲಾಹನ) ಆದೇಶವಿಲ್ಲದೆ ಮೀರಿ ಹೋಗಲು ನಿಮಗೆ ಸಾಧ್ಯವಾಗದು
36.ನಿಮ್ಮ ಮೇಲೆ ಬೆಂಕಿಯ ಜ್ವಾಲೆಯನ್ನು ಹಾಗೂ ಹೊಗೆಯನ್ನು ಎರಗಿಸಲಾಗುವುದು ಮತ್ತು (ಅವುಗಳನ್ನು) ಎದುರಿಸಲು ನಿಮಗೆ ಸಾಧ್ಯವಾಗದು
42.(ಅಂದು) ಅಪರಾಧಿಗಳು ತಮ್ಮ ಮುಖಗಳಿಂದಲೇ ಗುರುತಿಸಲ್ಪಡುವರು ಮತ್ತು ಅವರನ್ನು (ಎಳೆದೊಯ್ಯಲು) ಅವರ ಹಣೆ ಹಾಗೂ ಕಾಲುಗಳಿಂದಲೇ ಹಿಡಿಯಲಾಗುವುದು
55.ಅವರು ರೇಶ್ಮೆ ಹೊದಿಸಿದ ನೆಲದಲ್ಲಿ ದಿಂಬುಗಳಿಗೆ ಒರಗಿಕೊಂಡಿರುವರು ಮತ್ತು ಎರಡೂ ತೋಟಗಳ ಹಣ್ಣುಗಳು ಅವರಿಗೆ ಸಮೀಪವಾಗಿರುವವು
57.ಅವುಗಳಲ್ಲಿ, ದೃಷ್ಟಿ ತಗ್ಗಿಸಿರುವ ಸ್ತ್ರೀಯರಿರುವರು. ಇವರಿಗಿಂತ ಮುನ್ನ ಅವರನ್ನು ಮಾನವರಾಗಲಿ ಜಿನ್ನ್ಗಳಾಗಲಿ ಮುಟ್ಟಿರಲಾರರು