3.ಅವರು ಯಾವುದಾದರೂ ಪುರಾವೆಯನ್ನು ಕಂಡಾಗ ಮುಖ ತಿರುಗಿಸಿಕೊಳ್ಳುತ್ತಾರೆ ಮತ್ತು ಇದು ತೀರ ತಾತ್ಕಾಲಿಕ ಜಾದೂಗಾರಿಕೆ ಎನ್ನುತ್ತಾರೆ
4.ಅವರು (ಸತ್ಯವನ್ನು) ತಿರಸ್ಕರಿಸಿದರು ಮತ್ತು ಸ್ವೇಚ್ಛೆಯನ್ನು ಅನುಸರಿಸಿದರು. ನಿಜವಾಗಿ, ಎಲ್ಲ ವಿಷಯಗಳಿಗೂ ಒಂದು ಕಾಲ ನಿಶ್ಚಿತವಾಗಿರುತ್ತದೆ
7.(ದೂತರೇ,) ನೀವು ಅವರನ್ನು ಕಡೆಗಣಿಸಿಬಿಡಿರಿ. (ಶೀಘ್ರದಲ್ಲೇ) ಕರೆಯುವವನೊಬ್ಬನು ತೀರಾ ಅಪ್ರಿಯವಾದುದರ ಕಡೆಗೆ (ಅವರನ್ನು) ಕರೆಯುವನು
10.ಅವರಿಗಿಂತ ಹಿಂದೆ ನೂಹ್ರ ಜನಾಂಗವು (ಸತ್ಯವನ್ನು) ತಿರಸ್ಕರಿಸಿತ್ತು. ಅವರು, ನಮ್ಮ ದಾಸರನ್ನು ತಿರಸ್ಕರಿಸಿದ್ದರು ಮತ್ತು ಅವರನ್ನು ಹುಚ್ಚನೆಂದು ಕರೆದರು ಹಾಗೂ ಅವರಿಗೆ ಬೆದರಿಕೆ ಒಡ್ಡಿದರು
11.ಕೊನೆಗೆ ಅವರು (ನೂಹರು), ನಾನಿದೋ ಸೋತು ಹೋಗಿದ್ದೇನೆ. ಇದೀಗ ನೀನೇ ಪ್ರತೀಕಾರ ತೀರಿಸು ಎಂದು ತಮ್ಮ ಒಡೆಯನಿಗೆ ಮೊರೆ ಇಟ್ಟರು
13.ಮತ್ತು ನಾವು ಭೂಮಿಯಿಂದ ಚಿಲುಮೆಗಳನ್ನು ಹರಿಸಿಬಿಟ್ಟೆವು. ಕೊನೆಗೆ, ಮೊದಲೇ ನಿರ್ಧಾರವಾಗಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಗ್ರಹವಾಯಿತು
15.ಅದು ನಮ್ಮ ಕಣ್ಣ ಮುಂದೆಯೇ (ನಮ್ಮ ಕಾವಲಿನಲ್ಲಿ) ಚಲಿಸುತ್ತಿತ್ತು. (ಹೀಗಿತ್ತು) ಧಿಕ್ಕರಿಸಲ್ಪಟ್ಟವನ ಪರವಾಗಿ ತೀರಿಸಲಾದ ಪ್ರತೀಕಾರ
25.ಅವರು ಹೇಳಿದರು; ನಾವೇನು, ನಮ್ಮೊಳಗಿನ ಒಬ್ಬ ಮಾನವನನ್ನು ಹಿಂಬಾಲಿಸಬೇಕೇ? ಹಾಗೆ ಮಾಡಿದರೆ ನಾವು ದಾರಿಗೆಟ್ಟವರು ಹಾಗೂ ಹುಚ್ಚರಾಗಿ ಬಿಡುವೆವು
26.ನಮ್ಮ ಪೈಕಿ ಅವನಿಗೆ ದಿವ್ಯ ಬೋಧನೆಯನ್ನು ಇಳಿಸಿಕೊಡಲಾಗಿದೆಯೇ? ಅವನಂತು ಸುಳ್ಳುಗಾರ ಹಾಗೂ ತನ್ನನ್ನೇ ಹೊಗಳುವವನಾಗಿದ್ದಾನೆ
28.ನಾವು ಅವರ ಪಾಲಿಗೆ ಪರೀಕ್ಷೆಯಾಗಿ ಒಂದು ಹೆಣ್ಣೊಂಟೆಯನ್ನು ಕಳಿಸುವೆವು (ಸಾಲಿಹರೇ,) ನೀವು ಅವರನ್ನು ನೋಡುತ್ತಲಿರಿ ಹಾಗೂ ಸಹನಶೀಲರಾಗಿರಿ
29.ಮತ್ತು ನೀರನ್ನು ಅವರ ನಡುವೆ ಹಂಚಲಾಗಿದೆ. ಪ್ರತಿಯೊಬ್ಬರೂ ನೀರು ಕುಡಿಯುವ ತಮ್ಮ ಸರದಿಯ ವೇಳೆ ಹಾಜರಿರಬೇಕು ಎಂದು ಅವರಿಗೆ ತಿಳಿಸಿರಿ (ಎನ್ನಲಾಯಿತು)
35.ನಾವು ಅವರ ಮೇಲೆ ಕಲ್ಲುಗಳನ್ನು ಸುರಿಸುವ ಬಿರುಗಾಳಿಯನ್ನು ಎರಗಿಸಿದೆವು – ಲೂತ್ರ ಮನೆಯವರ ಹೊರತು. ಅವರನ್ನು ನಾವು ಮುಂಜಾವಿನ ಸಮಯದಲ್ಲೇ ರಕ್ಷಿಸಿದೆವು
37.ಅವರು (ಲೂತರು) ನಮ್ಮ ಶಿಕ್ಷೆಯ ಕುರಿತು ಅವರನ್ನು (ತಮ್ಮ ಜನಾಂಗದವರನ್ನು) ಎಚ್ಚರಿಸಿದ್ದರು. ಆದರೆ ಅವರು ಆ ಎಚ್ಚರಿಕೆಯ ಕುರಿತು ಜಗಳಾಡ ತೊಡಗಿದರು
38.ಮತ್ತು ಅವರು, ಅವರ (ಲೂತರ) ಅತಿಥಿಗಳನ್ನು ಅವರಿಂದ ಕಸಿದುಕೊಳ್ಳ ಬಯಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು – ಸವಿಯಿರಿ ನನ್ನ ಶಿಕ್ಷೆಯನ್ನು ಹಾಗೂ ಎಚ್ಚರಿಕೆಯನ್ನು
43.ಅವರು ನಮ್ಮ ಎಲ್ಲ ಪುರಾವೆಗಳನ್ನೂ ತಿರಸ್ಕರಿಸಿದರು. ಕೊನೆಗೆ ನಾವು ಅವರನ್ನು ಹಿಡಿದೆವು. ಅದು ಭಾರೀ ಪ್ರಬಲನೂ ಬಲಿಷ್ಠನೂ ಆಗಿರುವವನ ಹಿಡಿತವಾಗಿತ್ತು
44.ನಿಮ್ಮಲ್ಲಿನ ಧಿಕ್ಕಾರಿಗಳೇನು ಅವರಿಗಿಂತ ಉತ್ತಮರೇ? ಅಥವಾ (ಗತಕಾಲದ) ದಿವ್ಯ ಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮಾ ಪತ್ರ ನೀಡಲಾಗಿದೆಯೇ
49.ಅವರ ಮುಖಗಳನ್ನು ನೆಲಕ್ಕೆ ಒರಗಿಸಿ ಅವರನ್ನು ಎಳೆಯುತ್ತಾ ನರಕಕ್ಕೆ ಸಾಗಿಸಲಾಗುವ ದಿನ ‘‘ಸವಿಯಿರಿ ಬೆಂಕಿಯ ಉರಿಯನ್ನು’’ (ಎಂದು ಅವರೊಡನೆ ಹೇಳಲಾಗುವುದು)