عبدالسلام پوتیگه · ಕನ್ನಡ

1.ನಿಜವಾಗಿ ಧಿಕ್ಕಾರಿಗಳು ಅಹಂಕಾರ ಹಾಗೂ ಹಠಮಾರಿತನದಲ್ಲಿದ್ದಾರೆ
20.ಅವರು ಹಠಾತ್ತನೆ ದಾವೂದರ ಬಳಿಗೆ ಬಂದಾಗ ಅವರು ಬೆಚ್ಚಿ ಬಿದ್ದರು. ಅವರು ಹೇಳಿದರು ; ಅಂಜಬೇಡಿ, ನಾವು ಎರಡು ಜಗಳ ನಿರತ ಗುಂಪುಗಳು. ನಮ್ಮಲ್ಲಿ ಒಂದು ಗುಂಪು ಇನ್ನೊಂದರ ಮೇಲೆ ಅನ್ಯಾಯವೆಸಗಿದೆ. ನೀವೀಗ ನಮ್ಮ ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಿರಿ ಮತ್ತು ಅತಿರೇಕವೆಸಗಬೇಡಿ. ಸರಿಯಾದ ಮಾರ್ಗದೆಡೆಗೆ ನೀವು ನಮಗೆ ಮಾರ್ಗದರ್ಶನ ಮಾಡಿರಿ
22.ಅವರು (ದಾವೂದರು) ಹೇಳಿದರು ; ‘‘ನಿನ್ನ ಕುರಿಯನ್ನು ತನ್ನ ಕುರಿಗಳ ರಾಶಿಗೆ ಸೇರಿಸಲು ಆಗ್ರಹಿಸುವ ಮೂಲಕ ಅವನು ಖಂಡಿತ ನಿನ್ನ ಮೇಲೆ ಅಕ್ರಮವೆಸಗಿರುವನು. ಖಂಡಿತವಾಗಿಯೂ, ಜೊತೆಗೂಡಿ ಬದುಕುವವರಲ್ಲಿ ಹೆಚ್ಚಿನವರು ಪರಸ್ಪರ ಅನ್ಯಾಯವೆಸಗುತ್ತಾರೆ – ವಿಶ್ವಾಸಿಗಳು ಮತ್ತು ಸತ್ಕರ್ಮಿಗಳ ಹೊರತು. ಮತ್ತು ಅಂಥವರು ತುಂಬಾ ಕಡಿಮೆ‘‘. (ಈ ಮೂಲಕ) ನಾವು ತಮ್ಮನ್ನು ಪರೀಕ್ಷಿಸಿದೆವೆಂಬುದನ್ನು ದಾವೂದರು ಮನಗಂಡರು ಮತ್ತು ಅವರು ತಮ್ಮ ಒಡೆಯನ ಮುಂದೆ ಕ್ಷಮೆಯಾಚಿಸುತ್ತಾ, ಅವನಿಗೆ ಶರಣಾಗಿ, ಬಾಗುತ್ತಾ ಸಾಷ್ಟಾಂಗವೆರಗಿ ಬಿಟ್ಟರು
24.ದಾವೂದರೇ, ನಾವು ಖಂಡಿತ ನಿಮ್ಮನ್ನು ಭೂಮಿಯಲ್ಲಿ (ನಮ್ಮ) ಪ್ರತಿನಿಧಿಯಾಗಿಸಿರುವೆವು. ನೀವು ಜನರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಕೈಗೊಳ್ಳಿರಿ ಮತ್ತು ಸ್ವೇಚ್ಛೆಯನ್ನು ಅನುಸರಿಸಬೇಡಿ. ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ದೂರಗೊಳಿಸಿ ಬಿಡುವುದು. ಅಲ್ಲಾಹನ ಮಾರ್ಗದಿಂದ ದೂರ ಸರಿದು ಬಿಟ್ಟವರಿಗೆ, ಅವರು ವಿಚಾರಣೆಯ ದಿನವನ್ನು ಮರೆತುದಕ್ಕಾಗಿ ಖಂಡಿತ, ತೀವ್ರ ಶಿಕ್ಷೆ ಇದೆ
42.‘‘ನೀವು ಪೊರಕೆಯನ್ನು ಕೈಗೆತ್ತಿಕೊಂಡು ಹೊಡೆಯಿರಿ. ಮತ್ತು ನೀವು ನಿಮ್ಮ ಪ್ರತಿಜ್ಞೆಯನ್ನು ಮುರಿಯಬೇಡಿ’’ (ಎಂದು ನಾವು ಹೇಳಿದೆವು). ನಾವು ಅವರನ್ನು ಸಹನಶೀಲರಾಗಿ ಕಂಡೆವು. ಅವರು ಶ್ರೇಷ್ಠ ದಾಸರಾಗಿದ್ದರು ಮತ್ತು ಅವರು ಖಂಡಿತ ಮರಳುವವರಾಗಿದ್ದರು