عبدالسلام پوتیگه · ಕನ್ನಡ

1.ಅವರು ಹೇಳುತ್ತಾರೆ; ‘‘ಅವೆಲ್ಲಾ ಕೇವಲ ಗತಕಾಲದ ಕತೆಗಳು. ಅವನೇ ಅದನ್ನು ಬರೆಸಿ ತರುತ್ತಾನೆ. ಮುಂಜಾನೆ ಹಾಗೂ ಸಂಜೆ ಇದನ್ನೆಲ್ಲಾ ಅವನಿಗೆ ಯಾರೋ ಕಲಿಸಿಕೊಡುತ್ತಾರೆ’’
4.‘‘ಅಥವಾ ಅವನಿಗೆ ಒಂದು ನಿಧಿಯನ್ನೇಕೆ ನೀಡಲಾಗಿಲ್ಲ? ಅಥವಾ ಅವನಿಗೆ ತಿನ್ನುಣ್ಣುತ್ತಾ ಇರುವುದಕ್ಕೆ ಒಂದು ತೋಟವನ್ನಾದರೂ ಏಕೆ ನೀಡಲಾಗಿಲ್ಲ?’’ ಮತ್ತು ಅಕ್ರಮಿಗಳು (ಜನರೊಡನೆ), ‘‘ನೀವು ಕೇವಲ ಒಬ್ಬ ಮಾಟಪೀಡಿತನನ್ನು ಅನುಸರಿಸುತ್ತಿರುವಿರಿ’’ ಎನ್ನುತ್ತಾರೆ
14.ಅವರು ಹೇಳುವರು; ನೀನು ಪಾವನನು. ನಿನ್ನ ಹೊರತು ಬೇರೆ ಯಾರನ್ನೂ ನಮ್ಮ ಪೋಷಕರಾಗಿ ಪರಿಗಣಿಸುವುದು ನಮಗೆ ಭೂಷಣವಾಗಿರಲಿಲ್ಲ. ಆದರೆ ನೀನು, ಅವರು ನಿನ್ನ ಪ್ರಸ್ತಾಪವನ್ನೇ ಮರೆತು ಬಿಡುವಷ್ಟು ಸಂಪನ್ನತೆಯನ್ನು ಅವರಿಗೂ ಅವರ ಪೂರ್ವಜರಿಗೂ ದಯಪಾಲಿಸಿದೆ. ಅವರಂತೂ ನಾಶವಾಗಲೇಬೇಕಾದ ಜನರಾಗಿದ್ದರು
15.ನೀವು ಹೇಳಿದ್ದನ್ನೆಲ್ಲಾ ಅವರು ಸುಳ್ಳೆಂದು ತಿರಸ್ಕರಿಸಿದರು. ಇದೀಗ ಅವರ ಮೇಲಿನ ಶಿಕ್ಷೆಯನ್ನು ನಿವಾರಿಸಲಿಕ್ಕಾಗಲಿ ಅವರಿಗೆ ನೆರವಾಗಲಿಕ್ಕಾಗಲಿ ನಿಮಗೆ ಸಾಧ್ಯವಿಲ್ಲ. ನಿಮ್ಮ ಪೈಕಿ ಅಕ್ರಮವೆಸಗಿದವನಿಗೆ ನಾವು ಭಾರೀ ಶಿಕ್ಷೆಯ ರುಚಿ ಉಣಿಸುವೆವು
16.(ದೂತರೇ,) ನಾವು ನಿಮಗಿಂತ ಮುಂಚೆ ಕೂಡಾ ಆಹಾರ ಸೇವಿಸುತ್ತಿದ್ದವರನ್ನು ಮತ್ತು ಪೇಟೆಗಳಲ್ಲಿ ನಡೆದಾಡುತ್ತಿದ್ದವರನ್ನೇ ದೂತರಾಗಿ ಕಳಿಸಿದ್ದೆವು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಪಾಲಿಗೆ ಪರೀಕ್ಷೆಯಾಗಿಸಿದ್ದೆವು. ನೀವೀಗ ಸಹನೆ ತೋರುವಿರಾ? ನಿಮ್ಮ ಒಡೆಯನು ಎಲ್ಲವನ್ನೂ ನೋಡುವವನಾಗಿದ್ದಾನೆ
17.ನಮ್ಮನ್ನು ಭೇಟಿಯಾಗುವ ನಿರೀಕ್ಷೆ ಇಲ್ಲದವರು, ‘‘ನಮ್ಮ ಬಳಿಗೆ ಮಲಕ್‌ಗಳನ್ನೇಕೆ ಕಳಿಸಲಾಗಿಲ್ಲ ಅಥವಾ ನಾವು ನಮ್ಮ ದೇವರನ್ನು ನೋಡುವಂತಿಲ್ಲವೇಕೆ’’ ಎಂದು ಕೇಳುತ್ತಾರೆ. ನಿಜವಾಗಿ ಅವರು ತಮ್ಮ ಮನದೊಳಗೆ ಅಹಂಕಾರ ಪಡುತ್ತಿದ್ದಾರೆ ಮತ್ತು ಭಾರೀ ದೊಡ್ಡ ವಿದ್ರೋಹವೆಸಗುತ್ತಿದ್ದಾರೆ
28.ಧಿಕ್ಕಾರಿಗಳು, ‘‘ಅವನಿಗೆ ಕುರ್‌ಆನನ್ನು ಒಂದೇ ಬಾರಿಗೆ ಯಾಕೆ ಇಳಿಸಿ ಕೊಡಲಾಗಿಲ್ಲ?’’ ಎಂದು ಕೇಳುತ್ತಾರೆ. ಅದು ಹಾಗೆಯೇ. ಆ ಮೂಲಕ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಲಿಕ್ಕಾಗಿ, ನಾವು ಇದನ್ನು ಸ್ವಲ್ಪ ಸ್ವಲ್ಪವಾಗಿ ಓದಿ ಕೇಳಿಸುತ್ತೇವೆ
33.(ಈ ಹಿಂದೆ) ನೂಹರ ಜನಾಂಗವು ದೇವದೂತರುಗಳನ್ನು ತಿರಸ್ಕರಿಸಿದಾಗ ನಾವು ಅವರನ್ನು ಮುಳುಗಿಸಿ ಬಿಟ್ಟೆವು ಮತ್ತು ಅವರನ್ನು ಜನರ ಪಾಲಿಗೆ ಪಾಠವಾಗಿಸಿದೆವು. ಮತ್ತು ನಾವು ಅಕ್ರಮಿಗಳಿಗಾಗಿ ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುವೆವು
38.‘‘ನಾವು ಸ್ಥಿರವಾಗಿಲ್ಲದೆ ಇದ್ದಿದ್ದರೆ ಇವನಂತು ನಮ್ಮನ್ನು ನಮ್ಮ ದೇವರುಗಳಿಂದ ದೂರಗೊಳಿಸಿ ಬಿಡುತ್ತಿದ್ದನು’’ (ಎಂದು ಅವರು ಹೇಳುತ್ತಾರೆ). ಬಹುಬೇಗನೇ, ಅವರು ಶಿಕ್ಷೆಯನ್ನು ಕಾಣುವಾಗ, ಸರಿದಾರಿಯಿಂದ ತೀರಾ ದೂರ ಸಾಗಿಬಿಟ್ಟವರು ಯಾರೆಂಬುದು ಅವರಿಗೆ ತಿಳಿಯಲಿದೆ
56.ಆ ಪರಮ ದಯಾಳುವಿಗೆ ಸಾಷ್ಟಾಂಗವೆರಗಿರಿ ಎಂದು ಅವರೊಡನೆ ಹೇಳಿದಾಗ ಅವರು ಪರಮ ದಯಾಮಯನೆಂದರೆ ಏನು? ನಾವೇನು, ನೀನು ಆದೇಶಿಸಿದವರಿಗೆ ಸಾಷ್ಟಾಂಗವೆರಗಬೇಕೇ? ಎನ್ನುತ್ತಾರೆ. ಹೀಗೆ, ಇದು (ಈ ಕರೆಯು) ಅವರ ಜಿಗುಪ್ಸೆಯನ್ನಷ್ಟೇ ಹೆಚ್ಚಿಸಿತು
64.ಅವರು ಅಲ್ಲಾಹನ ಜೊತೆ ಬೇರೆ ಯಾವ ದೇವರನ್ನೂ ಪ್ರಾರ್ಥಿಸುವುದಿಲ್ಲ. ಅಲ್ಲಾಹನು ನಿಷೇಧಿಸಿರುವ ಯಾವುದೇ ಜೀವವನ್ನು ಅನ್ಯಾಯವಾಗಿ ಕೊಲ್ಲುವುದಿಲ್ಲ ಮತ್ತು ಅವರು ವ್ಯಭಿಚಾರ ಮಾಡುವುದಿಲ್ಲ. ಈ ಕೃತ್ಯಗಳನ್ನು ಮಾಡಿದವನು ಶಿಕ್ಷೆಯನ್ನು ಅನುಭವಿಸುವನು