عبدالسلام پوتیگه · ಕನ್ನಡ

1.ಭೂಮಿಯನ್ನು ಹಾಗೂ ಎತ್ತರದ ಆಕಾಶಗಳನ್ನು ಸೃಷ್ಟಿಸಿದವನೇ ಇದನ್ನು ಇಳಿಸಿಕೊಟ್ಟಿರುವನು
7.ಅವರು (ದೂರದಲ್ಲಿ) ಬೆಂಕಿಯನ್ನು ಕಂಡಾಗ, ತಮ್ಮ ಮನೆಯವರೊಡನೆ ಹೇಳಿದರು; ನೀವು ಇಲ್ಲೇ ಇರಿ. ನಾನು ಬೆಂಕಿಯನ್ನು ಕಂಡಿದ್ದೇನೆ. ಅಲ್ಲಿಂದ ನಿಮಗಾಗಿ ಕೆಂಡವನ್ನು ತರಲು ನನಗೆ ಸಾಧ್ಯವಾದೀತು ಅಥವಾ ಬೆಂಕಿಯ ಬಳಿ ನನಗೆ (ಮುಂದಿನ ದಾರಿಯ ಕುರಿತು) ಮಾರ್ಗದರ್ಶನ ಸಿಕ್ಕೀತು
36.ನೀನು ಅದನ್ನು (ಮಗುವನ್ನು) ಪೆಟ್ಟಿಗೆಯಲ್ಲಿಡು ಮತ್ತು ಪೆಟ್ಟಿಗೆಯನ್ನು ನದಿಯಲ್ಲಿ ಹಾಕಿ ಬಿಡು. ನದಿಯು ಅದನ್ನು ದಡಕ್ಕೆ ತಲುಪಿಸುವುದು. ಆ ಬಳಿಕ ನನ್ನ ಶತ್ರು ಹಾಗೂ ಅದರ (ಆ ಮಗುವಿನ) ಶತ್ರು ಅದನ್ನು ಎತ್ತಿಕೊಳ್ಳುವನು. ಮತ್ತು (ಕಂಡವರೆಲ್ಲಾ ಪ್ರೀತಿಸುವಂತೆ) ನಾವು ನಮ್ಮ ಕಡೆಯಿಂದ ನಿಮ್ಮ ಮೇಲೆ ವಾತ್ಸಲ್ಯವನ್ನು ಆವರಿಸಿ ಬಿಟ್ಟಿದ್ದೆವು. ಮತ್ತು ನನ್ನ ಕಣ್ಣ ಮುಂದೆಯೇ ನಿಮ್ಮ ಪೋಷಣೆ ನಡೆಯುವಂತಾಯಿತು
37.ನಿಮ್ಮ ಸಹೋದರಿಯು ನಡೆದು ಹೋಗುತ್ತಿದ್ದಳು ಮತ್ತು ಆಕೆ (ಫಿರ್‌ಔನ್‌ನೊಡನೆ) ‘‘ಈತನನ್ನು ಪೋಷಿಸಬಲ್ಲವರನ್ನು ನಾನು ನಿಮಗೆ ತೋರಿಸಲೇ?’’ ಎಂದು ಕೇಳಿದಳು. ಹೀಗೆ ನಾವು ಮತ್ತೆ ನಿಮ್ಮನ್ನು ನಿಮ್ಮ ತಾಯಿಯೆಡೆಗೆ ಮರಳಿಸಿದೆವು – ಆಕೆಯ ಕಣ್ಣು ತಂಪಾಗಲೆಂದು ಹಾಗೂ ಆಕೆ ದುಃಖಿಸದಿರಲೆಂದು. ಮುಂದೆ ನೀವು ಒಬ್ಬನ ಹತ್ಯೆ ನಡೆಸಿದಿರಿ. ಆಗ ನಾವು ನಿಮ್ಮನ್ನು ಸಂಕಟದಿಂದ ಪಾರುಗೊಳಿಸಿದೆವು ಮತ್ತು ನಿಮ್ಮನ್ನು ನಾವು ಹಲವು ಪರೀಕ್ಷೆಗಳಿಗೆ ಒಳಪಡಿಸಿದೆವು. ಆ ಬಳಿಕ ನೀವು ಹಲವು ವರ್ಷ ಮದ್‌ಯನ್‌ನವರ ಜೊತೆ ಇದ್ದಿರಿ. ಇದೀಗ ಓ ಮೂಸಾ, ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ
44.ನೀವೀಗ ಅವನ ಬಳಿಗೆ ಹೋಗಿರಿ ಮತ್ತು ಹೇಳಿರಿ; ನಾವು ಖಂಡಿತ ನಿನ್ನ ಒಡೆಯನ ದೂತರು. ನೀನು ಇಸ್ರಾಈಲರ ಸಂತತಿಯನ್ನು ನಮ್ಮ ಜೊತೆ ಕಳಿಸಿಕೊಡು. ನೀನು ಅವರನ್ನು ಹಿಂಸಿಸಬೇಡ. ನಾವು ನಿನ್ನ ಒಡೆಯನ ಕಡೆಯಿಂದ, ಪುರಾವೆಯೊಂದಿಗೆ ನಿನ್ನ ಬಳಿಗೆ ಬಂದಿರುವೆವು. ಸನ್ಮಾರ್ಗವನ್ನು ಅನುಸರಿಸುವವರಿಗೆ ಶಾಂತಿ ಸಿಗಲಿ
66.ನೀವೀಗ ನಿಮ್ಮ ಬಲಗೈಯಲ್ಲಿರುವುದನ್ನು ಎಸೆದು ಬಿಡಿರಿ. ಅವರು ರಚಿಸಿ ತಂದಿರುವ ಎಲ್ಲವನ್ನೂ ಅದು ನುಂಗಿ ಬಿಡುವುದು. ಅವರು ರಚಿಸಿ ತಂದಿರುವುದೆಲ್ಲವೂ ಖಂಡಿತವಾಗಿಯೂ ಕೇವಲ ಜಾದೂಗಾರಿಕೆಯ ಮೋಸವಾಗಿದೆ. ಜಾದೂಗಾರನು ಎಲ್ಲಿಗೆ ಹೋದರೂ ವಿಜಯಿಯಾಗಲಾರನು
68.ಅವನು (ಫಿರ್‌ಔನ್) ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಲ್ಲಾ! ಖಂಡಿತವಾಗಿಯೂ ಅವನೇ (ಮೂಸಾ) ನಿಮಗೆ ಜಾದೂಗಾರಿಕೆ ಕಲಿಸಿದ ನಿಮ್ಮ ಹಿರಿಯನು. ನಾನೀಗ ನಿಮ್ಮ ಕೈಗಳನ್ನು ಮತ್ತು ನಿಮ್ಮ ಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುತ್ತೇನೆ ಮತ್ತು ಖರ್ಜೂರದ ಕಂಬಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ನಮ್ಮ ಪೈಕಿ, ಹೆಚ್ಚು ತೀವ್ರವಾಗಿರುವ ಮತ್ತು ಬಹುಕಾಲ ಉಳಿಯುವ ಶಿಕ್ಷೆಯನ್ನು ನೀಡಬಲ್ಲವರು ಯಾರು ಎಂಬುದು ಆಗ ನಿಮಗೆ ತಿಳಿಯುವುದು
69.ಅವರು (ಜಾದೂಗಾರರು) ಹೇಳಿದರು; ನಮ್ಮ ಮುಂದೆ ಬಂದಿರುವ ಸ್ಪಷ್ಟ ಪುರಾವೆಗಳೆದುರು ಹಾಗೂ ನಮ್ಮನ್ನು ಸೃಷ್ಟಿಸಿದವನೆದುರು ನಾವು ಖಂಡಿತ ನಿನಗೆ ಪ್ರಾಶಸ್ತ್ಯ ನೀಡಲಾರೆವು. ನೀನೇನು ತೀರ್ಮಾನಿಸುವೆಯೋ ಅದನ್ನು ತೀರ್ಮಾನಿಸಿಬಿಡು. ನಿನಗೆ ಹೆಚ್ಚೆಂದರೆ ಈ ಲೋಕದ ಬದುಕಿನ ಕುರಿತು ಮಾತ್ರ ತೀರ್ಮಾನಿಸಲು ಸಾಧ್ಯ
70.ನಾವಂತು ನಮ್ಮ ಒಡೆಯನಲ್ಲಿ ನಂಬಿಕೆ ಇಟ್ಟಿರುವೆವು – ನಮ್ಮ ತಪ್ಪುಗಳನ್ನು ಮತ್ತು ಜಾದುವಿನ ಹೆಸರಲ್ಲಿ ನೀನು ಬಲವಂತವಾಗಿ ನಮ್ಮಿಂದ ಮಾಡಿಸಿದ ಎಲ್ಲ ಕೃತ್ಯಗಳನ್ನು ಅವನು ಕ್ಷಮಿಸಬೇಕೆಂದು (ನಾವು ಈ ನಿರ್ಧಾರ ಮಾಡಿರುವೆವು). ಅಲ್ಲಾಹನು ಸರ್ವಶ್ರೇಷ್ಠನಾಗಿದ್ದಾನೆ ಮತ್ತು ಸದಾಕಾಲ ಇರುವವನಾಗಿದ್ದಾನೆ
74.ಮುಂದೆ, ನಾವು ಮೂಸಾರಿಗೆ ದಿವ್ಯವಾಣಿಯನ್ನು ಕಳಿಸಿದೆವು; ನೀವು ರಾತ್ರಿ ಹೊತ್ತು ನನ್ನ ದಾಸರೊಂದಿಗೆ ಹೊರಡಿರಿ ಮತ್ತು ಅವರಿಗಾಗಿ ಸಮುದ್ರದಲ್ಲಿ ಒಣದಾರಿಗಳನ್ನು ನಿರ್ಮಿಸಿರಿ. ನಿಮಗೆ, ಬಂಧಿತನಾಗುವ ಭಯವೂ ಇರದು (ಮುಳುಗಿ ಬಿಡುವ) ಆಶಂಕೆಯೂ ಇರದು
77.ಇಸ್ರಾಈಲರ ಸಂತತಿಗಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು ಹಾಗೂ ತೂರ್ ಪರ್ವತದ ಬಲ ಭಾಗದಲ್ಲಿ ನಾವು ನಿಮಗೆ ಮಾತು ಕೊಟ್ಟೆವು ಮತ್ತು ನಿಮಗಾಗಿ ಮನ್ನ್ ಹಾಗೂ ಸಲ್ವಾ (ಎಂಬ ವಿಶೇಷ ಆಹಾರ)ಗಳನ್ನು ಇಳಿಸಿಕೊಟ್ಟೆವು
83.ಮೂಸಾ ತುಂಬಾ ಕೋಪಗೊಂಡು ದುಃಖದೊಂದಿಗೆ ತಮ್ಮ ಜನಾಂಗದ ಬಳಿಗೆ ಮರಳಿದರು. ಅವರು ಹೇಳಿದರು; ನನ್ನ ಜನಾಂಗದವರೇ, ನಿಮ್ಮ ಒಡೆಯನು ನಿಮಗೆ ಬಹಳ ಶ್ರೇಷ್ಠ ವಾಗ್ದಾನವನ್ನು ನೀಡಿರಲಿಲ್ಲವೇ? ವಾಗ್ದಾನದ ಕಾಲಾವಧಿಯು ನಿಮಗೆ ತುಂಬಾ ದೀರ್ಘವೆನಿಸಿಬಿಟ್ಟಿತೇ? ಅಥವಾ ನೀವು ನಿಮ್ಮ ಒಡೆಯನ ಕೋಪವನ್ನು ಆಮಂತ್ರಿಸಲು ಬಯಸಿ ಅದಕ್ಕಾಗಿ ನನ್ನ ಜೊತೆಗಿನ ಕರಾರನ್ನು ಮುರಿದಿರಾ
87.ಈ ಮೊದಲು ಹಾರೂನರು ಅವರೊಡನೆ ಹೇಳಿದರು; ನನ್ನ ಜನಾಂಗದವರೇ, ನಿಮ್ಮನ್ನು ಈ (ಕರುವಿನ ಆಕೃತಿಯ) ಮೂಲಕ ಪರೀಕ್ಷಿಸಲಾಗುತ್ತಿದೆ. ಖಂಡಿತವಾಗಿಯೂ ಆ ಪರಮ ದಯಾಳುವೇ ನಿಮ್ಮ ಒಡೆಯನು. ನೀವು ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ
91.ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರರೇ, ನೀವು ನನ್ನ ಗಡ್ಡವನ್ನು ಮತ್ತು ನನ್ನ ತಲೆಯನ್ನು ಹಿಡಿಯಬೇಡಿ. ನಿಜವಾಗಿ, ‘‘ನೀನು ನನ್ನ ಹಾಗೂ ಇಸ್ರಾಈಲರ ಸಂತತಿಯ ನಡುವೆ ಭಿನ್ನತೆ ಮೂಡಿಸಿದೆ ಮತ್ತು ನನ್ನ ಆದೇಶಕ್ಕಾಗಿ ನೀನು ಕಾಯಲಿಲ್ಲ’’ ಎಂದು ನೀವು ಹೇಳುವಿರೆಂಬ ಭಯ ನನಗಿತ್ತು
93.ಅವನು ಹೇಳಿದನು; ಅವರು ಕಾಣದ್ದನ್ನು ನಾನು ಕಂಡಿದ್ದೇನೆ. ದೇವದೂತರ ಹೆಜ್ಜೆ ಗುರುತು ಇದ್ದಲ್ಲಿಂದ ನಾನು ಒಂದು ಹಿಡಿ ಮಣ್ಣು ಹೆಕ್ಕಿ ಅದರ (ಕರುವಿನ ಆಕೃತಿಯ) ಮೇಲೆ ಹಾಕಿ ಬಿಟ್ಟಿದ್ದೆ. ನನ್ನ ಚಿತ್ತವು ನನಗೆ ಹಾಗೆಯೇ ಮಾಡಲು ಸೂಚಿಸಿತು
94.ಅವರು (ಮೂಸಾ) ಹೇಳಿದರು; ನೀನು ತೊಲಗಿಬಿಡು. ಈ ಲೋಕದ ಬದುಕಿನಲ್ಲಿ ನಿನಗಿರುವ ಶಿಕ್ಷೆಯೇನೆಂದರೆ ‘‘ನನ್ನನ್ನು ಮುಟ್ಟಬೇಡಿ’’ ಎಂದು ನೀನು, ಹೇಳುತ್ತಿರಬೇಕು. ನಿನಗಾಗಿ ಒಂದು ಸಮಯ ನಿಗದಿಯಾಗಿದೆ. ಅದನ್ನು ಬದಲಿಸಲು ನಿನ್ನಿಂದಾಗದು. ನೀನು ಅಷ್ಟೊಂದು ನಿಷ್ಠೆಯಿಂದ ನಂಬಿಕೊಂಡಿದ್ದ ಆ ನಿನ್ನ ದೇವರನ್ನೊಮ್ಮೆ ನೋಡು. ನಾವೀಗ ಅದನ್ನು ಸುಟ್ಟು ಬಿಡುವೆವು ಮತ್ತು ಅದರ ಬೂದಿಯನ್ನು ನದಿಯಲ್ಲಿ ಹರಿಸಿಬಿಡುವೆವು
111.(ದೂತರೇ,) ಅಲ್ಲಾಹನೇ ಮಹೋನ್ನತನು. ಅವನೇ ನೈಜ ದೊರೆ. ನೀವು ನಿಮ್ಮೆಡೆಗೆ ಕಳಿಸಲಾಗುವ ದಿವ್ಯವಾಣಿಯು ಪೂರ್ತಿಯಾಗುವ ಮುನ್ನ ಕುರ್‌ಆನ್‌ನ ವಿಷಯದಲ್ಲಿ ಆತುರ ಪಡಬೇಡಿ. ಮತ್ತು , ನನ್ನೊಡೆಯಾ, ನನಗೆ ಇನ್ನಷ್ಟು ಜ್ಞಾನವನ್ನು ನೀಡು ಎಂದು ಪ್ರಾರ್ಥಿಸಿರಿ
118.ಕೊನೆಗೆ ಅವರಿಬ್ಬರೂ ಅದರಿಂದ (ಆ ಮರದಿಂದ) ತಿಂದರು. ಕೂಡಲೇ ಅವರ ಗುಪ್ತಾಂಗಗಳು ಅವರ ಮುಂದೆ ಪ್ರಕಟವಾದುವು ಮತ್ತು ಅವರು ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳತೊಡಗಿದರು. ಹೀಗೆ ಆದಮರು ತಮ್ಮ ಒಡೆಯನ ಆಜ್ಞೆಯನ್ನು ಮೀರಿ ನಡೆದಾಗ, ದಾರಿ ತಪ್ಪಿದರು
120.ಅವನು (ಅಲ್ಲಾಹ್) ಹೇಳಿದನು; ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಮತ್ತೆ ಕೆಲವರ ಶತ್ರುಗಳಾಗುವರು. ನಿಮ್ಮ ಬಳಿಗೆ ನನ್ನ ಕಡೆಯಿಂದ ಮಾರ್ಗದರ್ಶನವು ಬಂದಾಗ, ನನ್ನ ಮಾರ್ಗದರ್ಶನವನ್ನು ಅನುಸರಿಸುವವನು ಎಂದಿಗೂ ದಾರಿಗೆಡಲಾರನು ಮತ್ತು ಅವನೆಂದೂ ಭಾಗ್ಯಹೀನನಾಗಲಾರನು
125.ಅವರಿಗಿಂತ ಮುಂಚೆ ನಾವು ಅನೇಕ ಜನಾಂಗಗಳನ್ನು ನಾಶಪಡಿಸಿದ್ದೇವೆಂಬುದು ಅವರಿಗೆ ಮಾರ್ಗದರ್ಶಿಯಲ್ಲವೇ? ಅವರು, ಅವರ (ನಾಶವಾದವರ) ಆ ಪಾಳು ಬಿದ್ದ ನಿವಾಸಗಳಲ್ಲಿ ನಡೆದಾಡುತ್ತಿರುತ್ತಾರೆ. ನಿಜವಾಗಿ ಬುದ್ಧಿ ಉಳ್ಳವರಿಗೆ ಇದರಲ್ಲಿ ಹಲವು ಪಾಠಗಳಿವೆ
127.(ದೂತರೇ,) ನೀವೀಗ ಅವರ ಎಲ್ಲ ಮಾತುಗಳನ್ನು ಸಹಿಸಿ ಕೊಳ್ಳಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತಮಾನಕ್ಕೆ ಮುಂಚೆಯೂ ರಾತ್ರಿಯ ಕೆಲವು ಕ್ಷಣಗಳಲ್ಲೂ ನಿಮ್ಮ ಒಡೆಯನ ಗುಣಗಾನ ಮಾಡುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಹಗಲಿನ ಗಡಿಭಾಗದಲ್ಲಿ (ಅಲ್ಲಾಹನ) ಪಾವಿತ್ರವನ್ನು ಜಪಿಸಿರಿ – ನೀವು ಸಂತೃಪ್ತರಾಗಬಹುದು
128.ಅವರಲ್ಲಿನ ಕೆಲವು ಗುಂಪುಗಳಿಗೆ, ಕೇವಲ ಇಹಲೋಕದ ಬದುಕಿನ ಶೋಭೆಯಾಗಿ ನಾವು ನೀಡಿರುವ ಬಳಕೆಯ ವಸ್ತುಗಳೆಡೆಗೆ ನೀವು ದೃಷ್ಟಿ ಹಾಯಿಸಬೇಡಿ. ನಾವು ಆ ಮೂಲಕ ಅವರನ್ನು ಪರೀಕ್ಷಿಸುತ್ತಿದ್ದೇವೆ. ನಿಜವಾಗಿ ನಿಮ್ಮ ಒಡೆಯನ ಕೊಡುಗೆಯೇ ಹೆಚ್ಚು ಶ್ರೇಷ್ಠವಾಗಿದೆ ಹಾಗೂ ಹೆಚ್ಚು ಕಾಲ ಉಳಿಯುತ್ತದೆ
129.ನೀವು ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ಸ್ವತಃ ನೀವು ಅದನ್ನು ಪಾಲಿಸಿರಿ. ನಾವು ನಿಮ್ಮೊಡನೆ ಆಹಾರವನ್ನೇನೂ ಬೇಡುವುದಿಲ್ಲ. ನಿಜವಾಗಿ ನಾವೇ ನಿಮಗೆ ಆಹಾರ ನೀಡುತ್ತೇವೆ. ಅಂತಿಮ ಸಾಫಲ್ಯವು ಧರ್ಮನಿಷ್ಠೆಗೇ ಸಲ್ಲುವುದು
131.ಒಂದು ವೇಳೆ ನಾವು ಇದಕ್ಕೆ (ಕುರ್‌ಆನ್‌ನ ಆಗಮನಕ್ಕೆ) ಮುಂಚೆಯೇ ಅವರನ್ನು ಒಂದು ಶಿಕ್ಷೆಯ ಮೂಲಕ ನಾಶಮಾಡಿ ಬಿಟ್ಟಿದ್ದರೆ ಅವರು ‘‘ನಮ್ಮೊಡೆಯಾ, ನೀನು ನಮ್ಮೆಡೆಗೆ ಒಬ್ಬ ದೂತನನ್ನೇಕೆ ಕಳಿಸಲಿಲ್ಲ? (ಕಳಿಸಿದ್ದರೆ) ನಾವು, ಅಪಮಾನಿತರಾಗುವ ಹಾಗೂ ನಿಂದ್ಯರಾಗುವ ಮುನ್ನ ನಿನ್ನ ವಚನಗಳನ್ನು ಅನುಸರಿಸುತ್ತಿದ್ದವು’’ ಎನ್ನುತ್ತಿದ್ದರು
135.ಅವರ ಮನಸ್ಸುಗಳು (ಆ ಕುರಿತು) ನಿರಾತಂಕವಾಗಿವೆ. ಮತ್ತು ಅಕ್ರಮಿಗಳು ಗುಟ್ಟಾಗಿ ಪರಸ್ಪರ (ಹೀಗೆಂದು) ಮಾತನಾಡಿಕೊಳ್ಳುತ್ತಿದ್ದಾರೆ;‘‘ಅವನು (ಮುಹಮ್ಮದ್.ಸ.) ನಿಮ್ಮಂತಹ ಒಬ್ಬ ಮಾನವನಲ್ಲದೆ ಬೇರೇನಾದರೂ ಆಗಿರುವನೇ? ನೀವೇನು ಕಣ್ಣಾರೆ ಕಂಡೂ, ಮಾಟದ ಬಳಿಗೆ ಬರುವಿರಾ?’’