8.ಅವರು ಆ ವಿಶ್ವಾಸಿಗಳ ವಿರುದ್ಧ ಪ್ರತೀಕಾರವೆಸಗಲು ಇಳಿದುದಕ್ಕೆ, ಅವರು (ಆ ವಿಶ್ವಾಸಿಗಳು) ಪ್ರಬಲನೂ ಪ್ರಶಂಸಾರ್ಹನೂ ಆದ ಅಲ್ಲಾಹನಲ್ಲಿ ನಂಬಿಕೆ ಇಟ್ಟರು ಎಂಬುದಷ್ಟೇ ಕಾರಣವಾಗಿತ್ತು
9.ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೇ (ಅಲ್ಲಾಹನಿಗೆ) ಸೇರಿದೆ. ಮತ್ತು ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ
10.ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ಹಿಂಸಿಸಿದವರು ಹಾಗೂ ಆ ಕುರಿತು ಪಶ್ಚಾತ್ತಾಪ ಪಡದವರು – ಅವರಿಗೆ ನರಕದ ಶಿಕ್ಷೆ ಕಾದಿದೆ ಮತ್ತು ಅವರಿಗೆ ಸುಡುವ ಶಿಕ್ಷೆ ಕಾದಿದೆ
11.ವಿಶ್ವಾಸಿಗಳಿಗೆ ಹಾಗೂ ಸತ್ಕರ್ಮಗಳನ್ನು ಮಾಡಿದವರಿಗೆ ತಳದಲ್ಲಿ ನದಿಗಳು ಹರಿಯುವ ಸ್ವರ್ಗ ತೋಟಗಳು ಸಿಗುವವು. ಇದು ನಿಜಕ್ಕೂ ದೊಡ್ಡ ಸೌಭಾಗ್ಯವಾಗಿದೆ
13.ಖಂಡಿತವಾಗಿಯೂ ಅವನೇ ಸೃಷ್ಟಿ ಕಾರ್ಯವನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು (ಪುನಃ ಸೃಷ್ಟಿಸುವನು)