1.ಅವರು ಹೇಳುತ್ತಿರುವುದನ್ನೆಲ್ಲಾ ನಾವು ಚೆನ್ನಾಗಿ ಬಲ್ಲೆವು. ನೀವು ಅವರನ್ನು ಬಲವಂತ ಪಡಿಸುವವರಲ್ಲ. ನನ್ನ ಮುನ್ನೆಚ್ಚರಿಕೆಯನ್ನು ಅಂಜುವವರಿಗೆ ನೀವು ಕುರ್ಆನಿನ ಮೂಲಕ ಉಪದೇಶಿಸಿರಿ
29.ಅವರಿಗೆ (ಇಬ್ರಾಹೀಮರಿಗೆ) ಅವರ ಕುರಿತು ಭಯವಾಯಿತು. ಅವರು (ಅತಿಥಿಗಳು), ‘‘ನೀವು ಅಂಜಬೇಡಿ’’ ಎಂದರು ಮತ್ತು ಅವರಿಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡಿದರು
30.ಅವರ ಪತ್ನಿಯು ಮುಂದೆ ಬಂದು ಅಚ್ಚರಿಯಿಂದ ತನ್ನ ಮುಖಕ್ಕೆ ಕೈ ಇಟ್ಟು, ‘‘ಬಂಜೆಯಾಗಿರುವ ವೃದ್ಧೆಗೆ (ಮಗುವಾಗುವುದೇ)?’’ ಎಂದರು
31.ಅವರು (ಅತಿಥಿಗಳು) ಹೇಳಿದರು; ‘‘ಹಾಗೆಯೇ ಆಗುವುದು. (ಹಾಗೆಂದು) ನಿಮ್ಮ ಒಡೆಯನು ಹೇಳಿರುವನು. ಅವನು ಖಂಡಿತ ಯುಕ್ತಿವಂತನೂ ಜ್ಞಾನಿಯೂ ಆಗಿರುವನು’’
40.ಅವನು (ಫಿರ್ಔನನು) ತನ್ನ ಶಕ್ತಿಯ ಗುಂಗಿನಲ್ಲಿ ಬಂಡಾಯವೆದ್ದನು ಮತ್ತು (ಮೂಸಾರನ್ನು) ಜಾದೂಗಾರ ಹಾಗೂ ಹುಚ್ಚನೆಂದು ಕರೆದನು
41.ನಾವು ಅವನನ್ನೂ ಅವನ ಪಡೆಗಳನ್ನೂ ಹಿಡಿದೆವು ಹಾಗೂ ಅವರನ್ನು ಕಡಲಿಗೆ ಎಸೆದು ಬಿಟ್ಟೆವು. ಅವನು ನಿಂದನೆಗೆ ಅರ್ಹನಾಗಿದ್ದನು
52.ಮತ್ತು ನೀವು ಅಲ್ಲಾಹನ ಜೊತೆ ಬೇರೊಬ್ಬರನ್ನು ದೇವರಾಗಿಸಿಕೊಳ್ಳಬೇಡಿ. ನಾನು ಅವನ ಕಡೆಯಿಂದ ನಿಮ್ಮನ್ನು ಸ್ಪಷ್ಟವಾಗಿ ಎಚ್ಚರಿಸುವವನಾಗಿದ್ದೇನೆ
53.ಇದೇ ರೀತಿ, ಅವರಿಗಿಂತ ಹಿಂದಿನವರು ತಮ್ಮ ಬಳಿಗೆ ಬಂದಿದ್ದ ಯಾವ ದೂತರನ್ನೂ ಜಾದೂಗಾರ ಅಥವಾ ಹುಚ್ಚ ಎಂದು ಕರೆಯದೆ ಬಿಟ್ಟಿರಲಿಲ್ಲ
60.ಅಕ್ರಮವೆಸಗಿದವರಿಗಾಗಿ (ಅವರ ಶಿಕ್ಷೆಗಾಗಿ), ಅವರ ಸಂಗಾತಿಗಳಿಗೆ ನಿಶ್ಚಿತವಾಗಿದ್ದಂತಹದೇ ಕಾಲವೊಂದು ನಿಶ್ಚಿತವಾಗಿದೆ. ಆದ್ದರಿಂದ ಅವರು ಆತುರ ಪಡದಿರಲಿ