5.ಅವನು ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯನಾಗಿದ್ದಾನೆ – ನೀವು ಅಚಲ ನಂಬಿಕೆ ಉಳ್ಳವರಾಗಿದ್ದರೆ (ಇದು ನಿಮಗೆ ಮನವರಿಕೆಯಾಗಿರುತ್ತದೆ)
6.ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ಅವನೇ ನಿಮ್ಮೊಡೆಯನು ಮತ್ತು ನಿಮ್ಮ ಹಿಂದಿನ ಪೂರ್ವಜರ ಒಡೆಯನು
16.(ಅವರು ಹೇಳಿದ್ದರು;) ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿರಿ. ನಿಸ್ಸಂದೇಹವಾಗಿಯೂ ನಾನು ವಿಶ್ವಾಸಾರ್ಹ ದೂತನಾಗಿದ್ದೇನೆ
18.ಮತ್ತು ನೀವು ನನ್ನನ್ನು ಕಲ್ಲೆಸೆದು ಕೊಲ್ಲುವ ವಿರುದ್ಧ ನಾನು ನನ್ನೊಡೆಯನೂ ನಿಮ್ಮೊಡೆಯನೂ ಆಗಿರುವಾತನ ರಕ್ಷಣೆಯನ್ನು ಕೋರುತ್ತೇನೆ
21.(ಅಲ್ಲಾಹನು ಆದೇಶಿಸಿದನು;) ರಾತ್ರಿಯ ವೇಳೆ ನೀವು ನಮ್ಮ ದಾಸರನ್ನು ಕರೆದುಕೊಂಡು ಹೋಗಿರಿ. ನಿಮ್ಮನ್ನು ಖಂಡಿತ ಹಿಂಬಾಲಿಸಲಾಗುವುದು
35.ಅವರು ಉತ್ತಮರೋ ಅಥವಾ ತುಬ್ಬಅ್ ಜನಾಂಗದವರು ಹಾಗೂ ಅವರಿಗಿಂತ ಹಿಂದೆ ಇದ್ದವರು ಉತ್ತಮರೋ? ನಾವು ಅವರನ್ನು ನಾಶ ಮಾಡಿದೆವು. ಅವರು ಅಪರಾಧಿಗಳಾಗಿದ್ದರು
54.(ಇಹಲೋಕದ) ಪ್ರಥಮ ಮರಣದ ಹೊರತು, ಅಲ್ಲಿ ಅವರು ಮರಣವನ್ನು ಎದುರಿಸಲಾರರು. ಅವನು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸಿರುವನು