عبدالسلام پوتیگه · ಕನ್ನಡ

1.ತಮ್ಮ ಮಾನವನ್ನು ಕಾಪಾಡಿಕೊಂಡಿರುತ್ತಾರೆ
10.ತರುವಾಯ ನಾವು ವೀರ್ಯವನ್ನು ರಕ್ತದ ಪಿಂಡವಾಗಿಸಿದೆವು ಮತ್ತು ಆ ರಕ್ತದ ಪಿಂಡವನ್ನು ಮಾಂಸಪಿಂಡವಾಗಿಸಿದೆವು ಮತ್ತು ಆ ಮಾಂಸಪಿಂಡದಿಂದ ಎಲುಬುಗಳನ್ನು ಸೃಷ್ಟಿಸಿದೆವು ಮತ್ತು ಎಲುಬುಗಳಿಗೆ ಮಾಂಸದ ಉಡುಗೆಯನ್ನು ತೊಡಿಸಿದೆವು. ಅನಂತರ ನಾವು ಆತನನ್ನು ಒಂದು ಹೊಸ ರೂಪದಲ್ಲಿ ಹುಟ್ಟಿಸಿದೆವು. ಅಲ್ಲಾಹನು ಸಮೃದ್ಧನು ಮತ್ತು ಅವನು ಅತ್ಯುತ್ತಮ ಸೃಷ್ಟಿಕರ್ತನು
17.ಜಾನುವಾರುಗಳಲ್ಲೂ ನಿಮಗೆ ಖಂಡಿತ ಪಾಠವಿದೆ. ಅವುಗಳ ಹೊಟ್ಟೆಯಲ್ಲಿರುವುದನ್ನು (ಹಾಲನ್ನು) ನಾವು ನಿಮಗೆ ಕುಡಿಸುತ್ತೇವೆ. ಅವುಗಳಲ್ಲಿ ನಿಮಗೆ (ಇತರ) ಹಲವಾರು ಪ್ರಯೋಜನಗಳಿವೆ ಮತ್ತು ಅವುಗಳಲ್ಲಿ (ಕೆಲವನ್ನು) ನೀವು ತಿನ್ನುತ್ತೀರಿ
19.ಈ ಹಿಂದೆ ನಾವು ನೂಹ್‌ರನ್ನು ಅವರ ಜನಾಂಗದವರೆಡೆಗೆ ರವಾನಿಸಿದ್ದೆವು. ‘‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವೇನು ಅಂಜುವುದಿಲ್ಲವೇ?’’ ಎಂದು ಅವರು ಉಪದೇಶಿಸಿದರು
20.ಅವರ ಜನಾಂಗದಲ್ಲಿದ್ದ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಅವನು ಕೇವಲ ಒಬ್ಬ ಮನುಷ್ಯ. ಅವನು ನಿಮಗಿಂತ ಹಿರಿಮೆ ಉಳ್ಳವನಾಗಬಯಸುತ್ತಾನೆ. ಅಲ್ಲಾಹನು ಬಯಸಿದ್ದರೆ (ದೂತರಾಗಿ) ಮಲಕ್‌ಗಳನ್ನು ಕಳುಹಿಸುತ್ತಿದ್ದನು. ನಾವು ನಮ್ಮ ಪೂರ್ವಜರಿಂದ ಇಂತಹದೇನನ್ನೂ ಕೇಳಿಲ್ಲ
23.ಆಗ ನಾವು ಅವರೆಡೆಗೆ (ಹೀಗೆಂದು) ದಿವ್ಯವಾಣಿಯನ್ನು ಕಳಿಸಿದೆವು; ನೀವು ನಮ್ಮ ಮೇಲ್ವಿಚಾರಣೆಯಲ್ಲಿ ಹಾಗೂ ನಮ್ಮ ದಿವ್ಯವಾಣಿಯನುಸಾರ ಒಂದು ಹಡಗನ್ನು ನಿರ್ಮಿಸಿರಿ. ತರುವಾಯ, ನಮ್ಮ ಆದೇಶ ಬಂದಾಗ ಹಾಗೂ ಚಿಲುಮೆಯು ಉಕ್ಕಿ ಹರಿದಾಗ, ಎಲ್ಲ ಜಾತಿಯ ಜೋಡಿ (ಗಂಡು ಹೆಣ್ಣು) ಗಳನ್ನು ಮತ್ತು ನಿಮ್ಮ ಮನೆಯವರ ಪೈಕಿ, ಈಗಾಗಲೇ ತೀರ್ಮಾನವಾಗಿರುವವರ ಹೊರತು, ಇತರರನ್ನು ಅದರಲ್ಲಿ ಕೂರಿಸಿರಿ. ಮತ್ತು ನೀವು ಅಕ್ರಮಿಗಳ ಕುರಿತು ನನ್ನೊಡನೆ ಮಾತನಾಡಬೇಡಿ. ಅವರನ್ನು ಖಂಡಿತ ಮುಳುಗಿಸಲಾಗುವುದು
29.ಅವರ ಜನಾಂಗದಲ್ಲಿನ, ಧಿಕ್ಕಾರಿಗಳಾಗಿದ್ದ ನಾಯಕರು, ಪರಲೋಕದ ಭೇಟಿಯನ್ನು ಸುಳ್ಳೆಂದು ತಿರಸ್ಕರಿಸಿದ್ದರು. ಮತ್ತು ಇಹ ಜೀವನದಲ್ಲಿ ನಾವು ಅವರಿಗೆ ಭಾರೀ ಸಂಪನ್ನತೆಯನ್ನು ನೀಡಿದ್ದೆವು. (ಅವರು) ಹೇಳಿದರು; ಅವನು ಕೇವಲ ನಿಮ್ಮಂತಹ ಒಬ್ಬ ಮನುಷ್ಯ. ನೀವು ತಿನ್ನುವಂತಹದ್ದನ್ನೇ ಅವನೂ ತಿನ್ನುತ್ತಾನೆ ಮತ್ತು ನೀವು ಕುಡಿಯುವಂತಹದ್ದನ್ನೇ ಅವನೂ ಕುಡಿಯುತ್ತಾನೆ
40.ತರುವಾಯ ನಾವು ಬೆನ್ನು ಬೆನ್ನಿಗೇ ನಮ್ಮ ದೂತರನ್ನು ಕಳಿಸಿದೆವು. ಪ್ರತಿಯೊಂದು ಸಮುದಾಯದವರೂ ತಮ್ಮ ಬಳಿಗೆ ತಮ್ಮ ದೂತನು ಬಂದಾಗ ಆತನನ್ನು ತಿರಸ್ಕರಿಸಿದರು. ನಾವು ಅವರನ್ನು ಒಬ್ಬರ ಹಿಂದೆ ಇನ್ನೊಬ್ಬರಂತೆ ನಿಲ್ಲಿಸಿದೆವು ಮತ್ತು ನಾವು ಅವರೆಲ್ಲರನ್ನೂ ಕೇವಲ ಕತೆಗಳಾಗಿ ಮಾರ್ಪಡಿಸಿ ಬಿಟ್ಟೆವು. (ಸತ್ಯವನ್ನು) ನಂಬದ ಜನಾಂಗಗಳಿಗೆ ವಿನಾಶ ಕಾದಿದೆ
67.ಒಂದು ವೇಳೆ ಸತ್ಯವು ಅವರ ಅಪೇಕ್ಷೆಗಳಿಗೆ ವಿಧೇಯವಾಗಿದ್ದರೆ, ಆಕಾಶಗಳೂ ಭೂಮಿಯೂ, ಅವುಗಳಲ್ಲಿ ಇರುವ ಎಲ್ಲರೂ ವಿನಾಶಕ್ಕೆ ತುತ್ತಾಗಿ ಬಿಡುತ್ತಿದ್ದರು. ನಿಜವಾಗಿ, ನಾವು ಅವರ ಬಳಿಗೆ ಅವರಿಗಾಗಿಯೇ ಇರುವ ಉಪದೇಶವನ್ನು ತಂದಿರುವೆವು. ಆದರೆ ಅವರು ತಮಗಾಗಿಯೇ ಇರುವ ಉಪದೇಶವನ್ನು ಕಡೆಗಣಿಸುತ್ತಿದ್ದಾರೆ
87.ಅಲ್ಲಾಹನು ಯಾರನ್ನೂ ತನ್ನ ಪುತ್ರನಾಗಿ ಆರಿಸಿಕೊಂಡಿಲ್ಲ ಮತ್ತು ಅವನ ಜೊತೆ ಬೇರಾವ ದೇವರೂ ಇಲ್ಲ. ಹಾಗೆ ಇದ್ದಿದ್ದರೆ ಅವರಲ್ಲಿ ಪ್ರತಿಯೊಬ್ಬರೂ ತಾವು ಸೃಷ್ಟಿಸಿದವುಗಳ ಜೊತೆ ಪ್ರತ್ಯೇಕ ಹೊರಟು ಬಿಡುತ್ತಿದ್ದರು ಮತ್ತು ಅವರೆಲ್ಲಾ ಪರಸ್ಪರರ ಮೇಲೆ ಆಕ್ರಮಣ ನಡೆಸುತ್ತಿದ್ದರು. ಅಲ್ಲಾಹನು ಪಾವನನು ಮತ್ತು ಅವರು ಹೊರಿಸುವ ಎಲ್ಲ ಆರೋಪಗಳಿಂದ ಮುಕ್ತನು
116.ವ್ಯಭಿಚಾರವೆಸಗಿದ ಸ್ತ್ರೀ ಮತ್ತು ವ್ಯಭಿಚಾರವೆಸಗಿದ ಪುರುಷ – ಅವರಲ್ಲಿ ಪ್ರತಿಯೊಬ್ಬರಿಗೂ ತಲಾ ನೂರು ಛಡಿ ಏಟುಗಳನ್ನು ಹೊಡೆಯಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಅವರ ಮೇಲಿನ ಸಹಾನುಭೂತಿಯು ಅಲ್ಲಾಹನ ಧರ್ಮದ ವಿಷಯದಲ್ಲಿ ನಿಮ್ಮನ್ನು ತಡೆಯದಿರಲಿ ಮತ್ತು ಅವರ ಶಿಕ್ಷೆಯನ್ನು ವಿಶ್ವಾಸಿಗಳ ಒಂದು ಗುಂಪು ನೋಡಲಿ
117.ವ್ಯಭಿಚಾರಿ ಪುರುಷನು ವ್ಯಭಿಚಾರಿ ಸ್ತ್ರೀಯನ್ನು ಅಥವಾ ಬಹುದೇವಾರಾಧಕಿಯನ್ನು ಮಾತ್ರ ವಿವಾಹವಾಗಲಿ. ಹಾಗೆಯೇ, ವ್ಯಭಿಚಾರಿ ಸ್ತ್ರೀಯನ್ನು ಒಬ್ಬ ವ್ಯಭಿಚಾರಿ ಪುರುಷನು ಅಥವಾ ಒಬ್ಬ ಬಹುದೇವಾರಾಧಕನು ಮಾತ್ರ ವಿವಾಹವಾಗಲಿ. ವಿಶ್ವಾಸಿಗಳ ಪಾಲಿಗೆ ಅದು (ವ್ಯಭಿಚಾರಿಗಳೊಂದಿಗೆ ವಿವಾಹ) ನಿಷಿದ್ಧವಾಗಿದೆ
118.ಸುಶೀಲ ಸ್ತ್ರೀಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು, ಆ ಕುರಿತು ನಾಲ್ಕು ಮಂದಿ ಸಾಕ್ಷಿಗಳನ್ನು ತರದಿದ್ದರೆ, ಅವರಿಗೆ (ಆರೋಪ ಹೊರಿಸಿದವರಿಗೆ) ಎಂಭತ್ತು ಛಡಿಯೇಟುಗಳನ್ನು ಹೊಡೆಯಿರಿ ಮತ್ತು ಮುಂದೆಂದೂ ಅವರ ಸಾಕ್ಷವನ್ನು ಅಂಗೀಕರಿಸಬೇಡಿ. ಅವರು ಅವಿಧೇಯರು