عبدالسلام پوتیگه · ಕನ್ನಡ

1.ಅವರು ಹೇಳಿದರು; ನನ್ನೊಡೆಯಾ, ನನ್ನ ಮೂಳೆಗಳೆಲ್ಲಾ ಟೊಳ್ಳಾಗಿವೆ. ವೃದ್ಧಾಪ್ಯದಿಂದಾಗಿ ನನ್ನ ತಲೆಯೆಲ್ಲಾ ಹಣ್ಣಾಗಿದೆ. (ಆದರೂ) ನನ್ನೊಡೆಯಾ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ನಿರಾಶನಾಗಿಲ್ಲ
18.ಅವನು ಹೇಳಿದನು; ಹಾಗೆಯೇ ಆಗುವುದು. ಇದು ನನಗೆ ತೀರಾ ಸುಲಭವೆಂದು ಹಾಗೂ ನಾವು ಆತನನ್ನು ಮಾನವರ ಪಾಲಿಗೆ ಪುರಾವೆಯಾಗಿಸುವೆವು ಮತ್ತು ನನ್ನ ಕಡೆಯಿಂದ ಬಂದ ಅನುಗ್ರಹವಾಗಿಸುವೆವು ಎಂದು ನಿನ್ನ ಒಡೆಯನೇ ಹೇಳುತ್ತಾನೆ. ಇದೊಂದು ಪೂರ್ವ ನಿಶ್ಚಿತ ತೀರ್ಮಾನವಾಗಿದೆ
23.ನೀನು ತಿನ್ನು, ಕುಡಿ ಮತ್ತು ನಿನ್ನ ಕಣ್ಣುಗಳನ್ನು ತಣಿಸಿಕೋ. ಇನ್ನು ನೀನು ಯಾರಾದರೊಬ್ಬ ವ್ಯಕ್ತಿಯನ್ನು ಕಂಡರೆ, ನಾನು ಆ ಪರಮ ದಯಾಮಯನಿಗಾಗಿ ಉಪವಾಸ ಆಚರಿಸುವ ಹರಕೆ ಹೊತ್ತಿದ್ದೇನೆ. ಇಂದು ನಾನು ಯಾವ ವ್ಯಕ್ತಿಯ ಜೊತೆಗೂ ಖಂಡಿತ ಮಾತನಾಡಲಾರೆ – ಎಂದು ಹೇಳು
45.ನಾನೀಗ ನಿಮ್ಮನ್ನೂ, ನೀವು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಿದ್ದಿರೋ ಅವರೆಲ್ಲರನ್ನೂ ಬಿಟ್ಟು ಹೊರಡುತ್ತಿದ್ದೇನೆ. ಮತ್ತು ನಾನು ನನ್ನ ಒಡೆಯನನ್ನು ಮಾತ್ರ ಪ್ರಾರ್ಥಿಸುತ್ತೇನೆ. ನನ್ನ ಒಡೆಯನನ್ನು ಪ್ರಾರ್ಥಿಸಿದರೆ ನಾನೆಂದೂ ನಿರಾಶನಾಗಬೇಕಾಗಿಲ್ಲ
55.ಅವರೆಲ್ಲಾ ಅಲ್ಲಾಹನ ಪುರಸ್ಕಾರಕ್ಕೆ ಪಾತ್ರರಾದ ಪ್ರವಾದಿಗಳು, ಆದಮ್‌ರ ಸಂತತಿಗೆ ಸೇರಿದವರು, ನಾವು ನೂಹ್ರ ಜೊತೆ (ಹಡಗಿನೊಳಕ್ಕೆ) ಹತ್ತಿಸಿದವರು ಮತ್ತು ಇಬ್ರಾಹೀಮ್ ಹಾಗೂ ಇಸ್ರಾಈಲರ ಸಂತತಿಯವರಾಗಿದ್ದರು. ನಾವು ಅವರಿಗೆ ಸರಿದಾರಿಯನ್ನು ತೋರಿದ್ದೆವು ಮತ್ತು ಅವರನ್ನು ಆಯ್ದುಕೊಂಡಿದ್ದೆವು. ಅವರ ಮುಂದೆ ಪರಮ ದಯಾಮಯನ ವಚನಗಳನ್ನು ಓದಿದಾಗಲೆಲ್ಲಾ ಅವರು ಬಿದ್ದು, ಸಾಷ್ಟಾಂಗವೆರಗಿ, ಅತ್ತು ಬಿಡುತ್ತಿದ್ದರು
61.(ಮಲಕ್‌ಗಳು ಹೇಳುತ್ತಾರೆ;) ನಾವು ನಿಮ್ಮ ಒಡೆಯನ ಆದೇಶವಿಲ್ಲದೆ ಇಳಿದು ಬರುವುದಿಲ್ಲ. ನಮ್ಮ ಮುಂದಿರುವ, ನಮ್ಮ ಹಿಂದಿರುವ ಹಾಗೂ ಅವುಗಳ ನಡುವೆ ಇರುವ ಎಲ್ಲವೂ ಅವನಿಗೇ ಸೇರಿವೆ ಮತ್ತು ನಿಮ್ಮ ಒಡೆಯನು ಯಾವ ವಿಷಯವನ್ನೂ ಮರೆಯುವುದಿಲ್ಲ
70.ಧಿಕ್ಕಾರಿಗಳ ಮುಂದೆ ನಮ್ಮ ಸುಸ್ಪಷ್ಟ ವಚನಗಳನ್ನು ಓದಿ ಕೇಳಿಸಲಾದಾಗ, ಅವರು ವಿಶ್ವಾಸಿಗಳೊಡನೆ, ‘‘ನಮ್ಮಿಬ್ಬರ ಪೈಕಿ ಯಾವ ಗುಂಪು ಹೆಚ್ಚು ಉತ್ತಮ ಸ್ಥಾನದಲ್ಲಿದೆ ಮತ್ತು ಯಾರ ಸಭೆ ಹೆಚ್ಚು ಸಂಪನ್ನವಾಗಿದೆ?’’ ಎಂದು ಕೇಳುತ್ತಾರೆ
72.ಹೇಳಿರಿ; ಆ ಪರಮ ದಯಾಮಯನು, ದಾರಿಗೆಟ್ಟವರಿಗೆ ಧಾರಾಳ ಕಾಲಾವಕಾಶವನ್ನು ನೀಡುತ್ತಾನೆ. ಕೊನೆಗೆ, ಅವರಿಗೆ ವಾಗ್ದಾನ ಮಾಡಲಾಗಿದ್ದ ಶಿಕ್ಷೆಯನ್ನು ಅಥವಾ ಆ ಅಂತಿಮ ಘಳಿಗೆಯನ್ನು ಅವರು ಕಣ್ಣಾರೆ ಕಾಣುತ್ತಾರೆ. ಯಾರ ನೆಲೆ ಹೆಚ್ಚು ಕೆಟ್ಟದು ಮತ್ತು ಯಾರ ಪಡೆ ಹೆಚ್ಚು ದುರ್ಬಲ ಎಂಬುದನ್ನು ಆಗ ಅವರು ಮನಗಾಣುವರು
73.ಸನ್ಮಾರ್ಗವನ್ನು ಅನುಸರಿಸುವವರಿಗೆ ಅಲ್ಲಾಹನು ಇನ್ನಷ್ಟು (ಸ್ಪಷ್ಟ) ಮಾರ್ಗದರ್ಶನವನ್ನು ನೀಡುತ್ತಿರುತ್ತಾನೆ. ಪ್ರತಿಫಲದ ದೃಷ್ಟಿಯಿಂದಲೂ, ಶ್ರೇಷ್ಠ ಫಲಿತಾಂಶದ ದೃಷ್ಟಿಯಿಂದಲೂ ಬಹುಕಾಲ ಉಳಿದಿರುವ ಸತ್ಕಾರ್ಯಗಳೇ ನಿಮ್ಮ ಒಡೆಯನ ಬಳಿ ಶ್ರೇಷ್ಠವಾಗಿವೆ