قاریعہ
عبدالسلام پوتیگه · ಕನ್ನಡ
1.
ಭಾರೀ ಆಘಾತ
2.
ಏನದು, ಭಾರೀ ಆಘಾತ
3.
ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು
4.
ಅಂದು ಜನರು ಚದರಿದ ಹಾತೆಗಳಂತಾಗುವರು
5.
ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು
6.
ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ –
7.
– ಅವನು ಸಂತೃಪ್ತನಾಗಿ ಸುಖ ಭೋಗದಲ್ಲಿರುವನು
8.
ಮತ್ತು ಯಾರ ತಕ್ಕಡಿ ಅಂದು ಹಗುರವಾಗಿರುವುದೋ –
9.
– ತಳವಿಲ್ಲದ ಹೊಂಡವೇ ಅವನ ನೆಲೆಯಾಗಿ ಬಿಡುವುದು
10.
ಅದೇನೆಂದು ನಿಮಗೇನು ಗೊತ್ತು
11.
ಅದು ಉರಿಯುವ ಬೆಂಕಿಯಾಗಿರುವುದು
پچھلی سورہ
اگلی سورہ